ಕೊರೋನ ಬಿಕ್ಕಟ್ಟನ್ನು ಭಾರತ ವಿರೋಧಿ ಶಕ್ತಿ ಲಾಭಕ್ಕೆ ಬಳಸಬಹುದು: ಆರೆಸ್ಸೆಸ್‌ ಮುಖಂಡ ದತ್ತಾತ್ರೇಯ ಹೊಸಬಾಳೆ

Update: 2021-04-24 17:27 GMT

ಹೊಸದಿಲ್ಲಿ, ಎ.24: ಕೋವಿಡ್-19 ಸಾಂಕ್ರಾಮಿಕ ರೋಗ ಭಾರತಕ್ಕೆ ಕಠಿಣ ಅಸಾಧಾರಣ ಸವಾಲುಗಳನ್ನು ಒಡ್ಡಿದೆ ಎಂದು ಶನಿವಾರ ಹೇಳಿರುವ ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಈ ಪ್ರತಿಕೂಲ ಪರಿಸ್ಥಿತಿಯನ್ನು ವಿಧ್ವಂಸಕಕಾರಿ ಹಾಗೂ ಭಾರತ ವಿರೋಧಿ ಶಕ್ತಿಗಳು ಲಾಭ ಪಡೆದುಕೊಳ್ಳಬಹುದು ಎಂದಿದ್ದಾರೆ. ‘‘ಪರಿಸ್ಥಿತಿ ಗಂಭೀರವಾಗಿದ್ದರೂ ಸಮಾಜದ ಶಕ್ತಿ ಇನ್ನೂ ಅಗಾಧವಾಗಿಯೇ ಇದೆ. ಈ ಅತ್ಯಂತ ನಿರ್ಣಾಯಕವಾದ ಬಿಕ್ಕಟ್ಟನ್ನು ಎದುರಿಸುವ ನಮ್ಮ ಶಕ್ತಿ ಬಗ್ಗೆ ಇಡೀ ಜಗತ್ತಿಗೇ ತಿಳಿದಿದೆ’’ ಎಂದು ಹೊಸಬಾಳೆ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ನಕಾರಾತ್ಮಕತೆ ಹಾಗೂ ಅಪನಂಬಿಕೆಯನ್ನು ಸೃಷ್ಟಿಸಲು ಈ ಪ್ರತಿಕೂಲ ವಾತಾವರಣವನ್ನು ವಿಧ್ವಂಸಕಾರಿ ಹಾಗೂ ಭಾರತ ವಿರೋಧಿ ಪಡೆಗಳು ಬಳಸಿಕೊಳ್ಳುವ ಸಾಧ್ಯತೆ ಕೂಡ ಇದೆ. ದೇಶವಾಸಿಗಳು ಬಿಕ್ಕಟ್ಟನ್ನು ತಮ್ಮ ಸಕಾರಾತ್ಮಕ ಶ್ರಮದ ಮೂಲಕ ಪರಿಹರಿಸುವುದರೊಂದಿಗೆ, ಈ ವಿಧ್ವಂಸಕ ಶಕ್ತಿಗಳ ಪಿತೂರಿಯ ಬಗ್ಗೆ ಎಚ್ಚರ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಸಮಾಜದಲ್ಲಿ ಸಕಾರಾತ್ಮಕತೆ, ಭರವಸೆ ಹಾಗೂ ನಂಬಿಕೆಯ ವಾತಾವರಣವನ್ನು ಕಾಪಾಡಲು ಮಾಧ್ಯಮ ಸೇರಿದಂತೆ ಸಮಾಜದ ಎಲ್ಲ ವರ್ಗಗಳು ಕೊಡುಗೆ ನೀಡಬೇಕು ಎಂದು ಮನವಿ ಮಾಡಿದ ಅವರು, ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವವರು ಸಕಾರಾತ್ಮಕ ಪಾತ್ರ ವಹಿಸಬೇಕು. ಸಂಯಮ ಹಾಗೂ ಎಚ್ಚರಿಕೆ ವಹಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News