ಗುಜರಾತ್ ನಲ್ಲಿ ಅಕ್ರಮ ರೆಮ್ಡೆಸಿವಿರ್ ಮಾರಾಟಕ್ಕೆ ಯತ್ನ: ವೈದ್ಯ ಸೇರಿದಂತೆ ಮೂವರ ಬಂಧನ

Update: 2021-04-25 17:34 GMT

ಸೂರತ್, ಎ. 25: ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಅತ್ಯಧಿಕ ಬೇಡಿಕೆ ಇರುವ ರೆಮ್ಡೆಸಿವಿರ್ ಇಂಜಕ್ಷನ್ ಅನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಿದ ಆರೋಪದಲ್ಲಿ ಸೂರತ್ನ ಓರ್ವ ವೈದ್ಯ ಹಾಗೂ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.

ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಗುಜರಾತ್ ಸೂರತ್ನ ವಿವಿಧ ಪ್ರದೇಶಗಳಲ್ಲಿ ಶನಿವಾರ ದಾಳಿ ನಡೆಸಿದ ಕ್ರೈಮ್ ಬ್ರಾಂಚ್ನ ತಂಡ ನಾಲ್ವರನ್ನು ಬಂಧಿಸಿತು. ಅಲ್ಲದೆ ಅವರಲ್ಲಿದ್ದ ರೆಮ್ಡೆಸಿವಿರ್ ಸೀಶೆಗಳನ್ನು ವಶಪಡಿಸಿಕೊಂಡಿತು ಎಂದು ಅವರು ಹೇಳಿದ್ದಾರೆ.

ಅಗತ್ಯವಿರುವ ವ್ಯಕ್ತಿಗಳಿಗೆ ಈ ಔಷಧವನ್ನು ಗರಿಷ್ಠ ಚಿಲ್ಲೆರೆ ದರ (ಎಂಆರ್ಪಿ)ಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಈ ಆರೋಪಿಗಳು ಪ್ರಯತ್ನಿಸುತ್ತಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News