ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇರ್ಫಾನ್ ಖಾನ್, ಭಾನು ಅಥೈಯ್ಯ ಅವರಿಗೆ ಗೌರವ ಸಮರ್ಪಣೆ

Update: 2021-04-26 15:34 GMT
ಇರ್ಫಾನ್ ಖಾನ್

ಲಾಸ್ ಏಂಜಲಿಸ್: ಅಮೆರಿಕಾದ ಲಾಸ್ ಏಂಜಲಿಸ್ ನಗರದಲ್ಲಿ ರವಿವಾರ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತದ ದಿವಂಗತ ನಟ ಇರ್ಫಾನ್ ಖಾನ್ ಹಾಗೂ ಈ ಹಿಂದೆ ಆಸ್ಕರ್ ಪ್ರಶಸ್ತಿ ಪಡೆದಿದ್ದ ವಸ್ತ್ರ ವಿನ್ಯಾಸಕಿ ದಿವಂಗತ ಭಾನು ಅಥೈಯ್ಯ ಅವರಿಗೆ ಗೌರವ ಸಮರ್ಪಿಸಲಾಗಿದೆ. ಅಕಾಡೆಮಿಯ ಇನ್ ಮೆಮೋರಿಯಮ್ ವೀಡಿಯೋದಲ್ಲಿ ಈ ಇಬ್ಬರು ಭಾರತೀಯ ಸಾಧಕರನ್ನು ಸ್ಮರಿಸಲಾಗಿದೆ.

ಇರ್ಫಾನ್ ಅವರು ಹಾಲಿವುಡ್ ಚಿತ್ರಗಳಾದ ಲೈಫ್ ಆಫ್ ಪೈ, ಜುರಾಸಿಕ್ ವರ್ಲ್ಡ್, ಇನ್ಫೆರ್ನೊ ಇವುಗಳಲ್ಲಿ ನಟಿಸಿದ್ದರು, ಭಾನು ಅವರು 1982ರಲ್ಲಿ ಬಿಡುಗಡೆಗೊಂಡ ಗಾಂಧಿ ಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.

'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದಲ್ಲಿ ಇರ್ಫಾನ್ ಜತೆ ನಟಿಸಿದ್ದ ಫ್ರೀಡಾ ಪಿಂಟೋ ಅವರು ಅಕಾಡೆಮಿಗಾಗಿ ಇರ್ಫಾನ್ ಅವರ ಸ್ಮರಣಾರ್ಥ ಬರೆದಿದ್ದು ಅದರಲ್ಲಿ ಅವರು "ಇರ್ಫಾನ್ ಅವರಂತೆ  ವಸ್ತುಶಃ ಯಾರೂ ಇಲ್ಲ. ಅವರ ಉತ್ತಮ ಗುಣ ಹಾಗೂ ಒಬ್ಬ ಕಲಾವಿದನಾಗಿ ಅವರಲ್ಲಿದ್ದ ಅಗಾಧ ಪ್ರತಿಭೆಯಿಂದಾಗಿ  ಅವರ ಮೇಲೆ ನಾನು ಬಹಳಷ್ಟು ಅಭಿಮಾನ ಹೊಂದುವಂತಾಯಿತು, ಅವರ ಉತ್ತಮ ಗುಣಗಳನನು ನನ್ನಲ್ಲಿ ಅಳವಡಿಸಿಕೊಳ್ಳಲು ಬಯಸಿದ್ದೆ,'' ಎಂದಿದ್ದಾರೆ.

ಮೆಮೋರಿಯಂ ವೀಡಿಯೋದಲ್ಲಿ ಮ್ಯಾಕ್ಸ್ ವೋನ್ ಸಿಡೊ, ಸೀನ್ ಕೊನ್ನರಿ, ಡಿಯಾನ ರಿಗ್ಗ್, ಹೆಲೆನ್ ಮೆಕ್‍ಕ್ರೊರಿ, ಹಾಗೂ ಚಾಡ್ವಿಕ್ ಬೋಸ್ ಮನ್ ಅವರಿಗೂ ಗೌರವ ಸಮರ್ಪಿಸಲಾಗಿದೆ.

83 ವರ್ಷದ ನಟ ಆಂಥೊನಿ ಹಾಪ್ಕಿನ್ಸ್ ಗೆ ಒಲಿದ ಆಸ್ಕರ್

(Photo source: Twitter/@AnthonyHopkins)

ಅತ್ಯುತ್ತಮ ನಟನೆಗಾಗಿ ಈ ವರ್ಷದ ಆಸ್ಕರ್ ಪ್ರಶಸ್ತಿಯನ್ನು 83 ವರ್ಷದ ಬ್ರಿಟಿಷ್ ನಟ ಆಂಥೊನಿ ಹಾಪ್ಕಿನ್ಸ್ ಗಳಿಸಿದ್ದಾರೆ. 'ದಿ ಫಾದರ್' ಚಿತ್ರದಲ್ಲಿ ಡೆಮೆನ್ಶಿಯಾದಿಂದ ಬಳಲುವ ವ್ಯಕ್ತಿಯಾಗಿ ಅವರು ನೀಡಿದ ಅದ್ಭುತ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಬಂದಿದೆ. ಇದು ಆಂಥೊನಿ ಅವರ ಪಾಲಿನ ಎರಡನೇ ಆಸ್ಕರ್ ಪ್ರಶಸ್ತಿಯಾಗಿದೆಯಲ್ಲದೆ ಆಸ್ಕರ್ ಪ್ರಶಸ್ತಿ ವಿಜೇತ ಅತ್ಯಂತ ಹಿರಿಯ ನಟನೆಂಬ ಹೆಗ್ಗಳಿಕೆಯೂ ಅವರದ್ದಾಗಿದೆ. ರವಿವಾರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಭಾಗವಹಿಸಿರಲಿಲ್ಲ.

'ನೊಮ್ಯಾಡ್‍ಲ್ಯಾಂಡ್' ಚಿತ್ರದಲ್ಲಿನ ಅಭಿನಯಕ್ಕಾಗಿ ಫ್ರಾನ್ಸೆಸ್ ಮೆಕ್‍ಡೊರ್ಮಂಡ್ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದಾರೆ. ಇದರೊಂದಿಗೆ ಅವರು ಮೂರು ಆಸ್ಕರ್ ಶ್ರೇಷ್ಠ ನಟ ಪ್ರಶಸ್ತಿಗಳನ್ನು ಪಡೆದಿರುವ ಡೇನಿಯಲ್ ಡೇ-ಲೂಯಿಸ್ರ ದಾಖಲೆಯನ್ನು ಸರಿಗಟ್ಟಿದರು.

ಡೇನಿಯಲ್ ಕಲೂಯ ‘ಜುದಾಸ್ ಆ್ಯಂಡ್ ದ ಬ್ಲಾಕ್ ಮೇಸಯ್ಯ’ ಚಿತ್ರದಲ್ಲಿನ ನಿರ್ವಹಣೆಗಾಗಿ ಶ್ರೇಷ್ಠ ಪೋಷಕ ನಟ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಯೌನ್ ಯುಹ್-ಜುಂಗ್ ‘ಮಿನಾರಿ’ ಚಿತ್ರಕ್ಕಾಗಿ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಡೆನ್ಮಾರ್ಕ್ನ ಚಿತ್ರ ‘ಅನದರ್ ರೌಂಡ್’ಗೆ ಶ್ರೇಷ್ಠ ಅಂತರ್ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭವು ಸಾಂಪ್ರದಾಯಿಕ ಸ್ಥಳವಾಗಿರುವ ಲಾಸ್ ಏಂಜಲಿಸ್ನ ಡಾಲ್ಬಿ ತಿಯೇಟರ್ನ ಬದಲು, ಸಮಾರಂಭದ ಹೆಚ್ಚಿನ ಭಾಗವು ಯೂನಿಯನ್ ಸ್ಟೇಶನ್ ನಲ್ಲಿ ನಡೆದಿದೆ.

'ನೊಮ್ಯಾಡ್‍ಲ್ಯಾಂಡ್' ಚಲನಚಿತ್ರ ಅತ್ಯುತ್ತಮ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನೂ ಬಾಚಿಕೊಂಡಿದೆ.

ಅತ್ಯುತ್ತಮ ಪೋಷಕ ನಟ; ಡ್ಯಾನಿಯಲ್ ಕಲೂಯಾ (ಜೂಡಸ್ ಆ್ಯಂಡ್ ಬ್ಲಾಕ್ ಮೆಶಿಯಾ)

ಅತ್ಯುತ್ತಮ ಪೋಷಕ ನಟಿ: ಯಾನ್ ಯು ಜಂಗ್ (ಮಿನಾರಿ)

ಅತ್ಯುತ್ತಮ ವಿಶ್ಯುವಲ್​ ಎಫೆಕ್ಟ್​: ಟೆನೆಟ್

ಅತ್ಯುತ್ತಮ ಧ್ವನಿ ವಿನ್ಯಾಸ: ಸೌಂಡ್​ ಆಫ್​ ಮೆಟಲ್

ಅತ್ಯುತ್ತಮ ಛಾಯಾಗ್ರಹಣ; ಮಾಂಕ್

ಅತ್ಯುತ್ತಮ ಒರಿಜಿನಲ್​ ಸ್ಕ್ರೀನ್​ಪ್ಲೇ: ಎಮೆರಲ್ಡ್​ ಫೆನಲ್ (ಪ್ರಾಮಿಸಿಂಗ್​ ಎಂಗ್​ ವುಮನ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News