ದಿಲ್ಲಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ: ಅರವಿಂದ ಕೇಜ್ರಿವಾಲ್

Update: 2021-04-26 07:30 GMT

ಹೊಸದಿಲ್ಲಿ: ದಿಲ್ಲಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ತಿಳಿಸಿದ್ದಾರೆ.

ಶನಿವಾರದಿಂದ ಎಲ್ಲ ವಯಸ್ಕರಿಗೆ ಲಸಿಕೆ ನೀಡಲಾಗುತ್ತದೆ.

“ದಿಲ್ಲಿ ಸರಕಾರವು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆಗಳನ್ನು ನೀಡಲು ನಿರ್ಧರಿಸಿದೆ. 1.34 ಕೋಟಿ ಲಸಿಕೆಯ ಖರೀದಿಗೆ ನಾವು ಇಂದು ಅನುಮೋದನೆ ನೀಡಿದ್ದೇವೆ. ಆದಷ್ಟು ಬೇಗನೆ ಇದನ್ನು ನಾವು ಖರೀದಿಸುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ಜನರಿಗೆ ಬೇಗನೆ ಲಸಿಕೆ ನೀಡಲಿದ್ದೇವೆ ಎಂದು ಕೇಜ್ರಿವಾಲ್ ಘೋಷಿಸಿದರು.

ಇದು ಕೇವಲ ದಿಲ್ಲಿಯ ಸರಕಾರಿ ಆಸ್ಪತ್ರೆಗೆ ಮಾತ್ರ ಅನ್ವಯವಾಗುವ ಸಾಧ್ಯತೆಯಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಹಣ ಪಾವತಿಸಬೇಕಾಗುತ್ತದೆ. 

ರಾಜ್ಯ ಸರಕಾರಗಳಿಗೆ ಲಸಿಕೆಗಳ ಬೆಲೆಯನ್ನು ಕಡಿತಗೊಳಿಸುವಂತೆ ಕೇಜ್ರಿವಾಲ್ ಲಸಿಕೆ ತಯಾರಕರಿಗೆ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News