ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ ಟಿಎಂಸಿ ನಾಯಕನ ಪತ್ನಿ ನಂದಿತಾ ಸಿನ್ಹಾ

Update: 2021-04-28 14:14 GMT

ಕೋಲ್ಕತಾ: ಇತ್ತೀಚೆಗೆ ಕೋವಿಡ್‌ನಿಂದ ನಿಧನರಾದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯ ಪತ್ನಿ ಚುನಾವಣಾ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

 ಖಾರ್ದಾದ ಟಿಎಂಸಿ ಪಕ್ಷದ ಅಭ್ಯರ್ಥಿ ಕಾಜಲ್ ಸಿನ್ಹಾ ಎಪ್ರಿಲ್ 25 ರಂದು ನಿಧನರಾಗಿದ್ದರು.

ಕಾಜಲ್ ಸಿನ್ಹಾ ಅವರ ಪತ್ನಿ ನಂದಿತಾ ಸಿನ್ಹಾ ಅವರು ಉಪ ಚುನಾವಣಾ ಆಯುಕ್ತ ಸುದೀಪ್ ಜೈನ್ ವಿರುದ್ಧ ಉದ್ದೇಶಪೂರ್ವಕವಾಗಿ ಕೊಲೆ ಆರೋಪವನ್ನು ದಾಖಲಿಸಿದ್ದಾರೆ.

 ಕೊರೋನವೈರಸ್ ಬಿಕ್ಕಟ್ಟನ್ನು ನಿಭಾಯಿಸಲು ಇಡೀ ರಾಷ್ಟ್ರ ಹೆಣಗಾಡುತ್ತಿರುವಾಗ ಚುನಾವಣಾ ಆಯೋಗವು ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆಯನ್ನು ನಡೆಸಲು ನಿರ್ಧರಿಸಿತು. ತಮಿಳುನಾಡು, ಕೇರಳ ಹಾಗೂ  ಪಾಂಡಿಚೇರಿಗಳಲ್ಲಿ ಅಸೆಂಬ್ಲಿ ಚುನಾವಣೆಗಳು ಒಂದೇ ಹಂತದಲ್ಲಿ ನಡೆದವು. ಆದರೆ  ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27, 2021 ರಿಂದ ಎಪ್ರಿಲ್ 29, 2021 ರವರೆಗೆ ಎಂಟು ಹಂತಗಳಲ್ಲಿ ಹಾಗೂ  ಅಸ್ಸಾಂ ಮೂರು ಮತದಾನವನ್ನು ನಡೆಸಲಾಯಿತು ಎಂದು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಐದು ರಾಜ್ಯಗಳಲ್ಲಿ ಚುನಾವಣೆಯನ್ನು ನಿಭಾಯಿಸಿರುವ ಚುನಾವಣಾ ಆಯೋಗವನ್ನು ಮದ್ರಾಸ್ ಹೈಕೋರ್ಟ್ ತೀವ್ರವಾಗಿ ಟೀಕಿಸಿದ ಎರಡು ದಿನಗಳ ನಂತರ ನಂದಿತಾ ಸಿನ್ಹಾ ಅವರು ಈ ಹೆಜ್ಜೆ ಇಟ್ಟಿದ್ದಾರೆ.

ಚುನಾವಣಾ ಆಯೋಗವು ಕೋವಿಡ್ ನ ಎರಡನೇ ಅಲೆಗೆ ಏಕೈಕ ಕಾರಣವಾಗಿದೆ. ನಿಮ್ಮ ಅಧಿಕಾರಿಗಳ ವಿರುದ್ಧ ಬಹುಶಃ ಕೊಲೆ ಆರೋಪವನ್ನು ದಾಖಲಿಸಬೇಕು ಎಂದು ನ್ಯಾಯಾಲಯವು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News