ಮುಂಬೈ:18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಮೇ 1ರಿಂದ ಆರಂಭಗೊಳ್ಳುವುದಿಲ್ಲ

Update: 2021-04-29 14:59 GMT

ಮುಂಬೈ,ಎ.29: ಕೋವಿಡ್-19 ಲಸಿಕೆಯ ಕೊರತೆಯಿಂದಾಗಿ ಮುಂಬೈನಲ್ಲಿ 18ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ನೀಡಿಕೆ ಕಾರ್ಯಕ್ರಮವು ನಿಗದಿಯಂತೆ ಮೇ 1ರಂದು ಆರಂಭಗೊಳ್ಳುತ್ತಿಲ್ಲ. ಸಾಕಷ್ಟು ಲಸಿಕೆ ಲಭ್ಯವಾದ ಬಳಿಕವೇ ಈ ಗುಂಪಿನವರಿಗೆ ಲಸಿಕೆಯನ್ನು ನೀಡಲಾಗುವುದು ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾದ ಅಶ್ವಿನಿ ಭಿಡೆ ಅವರು ಗುರುವಾರ ಟ್ವೀಟಿಸಿದ್ದಾರೆ.

ಎಲ್ಲ ವಯಸ್ಕರಿಗೆ ಲಸಿಕೆ ನೀಡಿಕೆಯ ಹೊಸ ಸುತ್ತು ಆರಂಭವಾದ ಬಳಿಕ ತಾವು ಲಸಿಕೆಯಿಂದ ವಂಚಿತರಾಗಬಹುದು ಎಂದು ಹಿರಿಯ ನಾಗರಿಕರು ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ತಿಳಿಸಿರುವ ಅವರು,ದಯವಿಟ್ಟು ನಾವು ಸಾಕಷ್ಟು ಲಸಿಕೆಯ ಸಂಗ್ರಹವನ್ನು ಹೊಂದುವವರೆಗೆ ಕಾಯಿರಿ ಮತ್ತು ಉದ್ದನೆಯ ಸರತಿಸಾಲುಗಳಲ್ಲಿ ನಿಲ್ಲುವ ಅಗತ್ಯವಿಲ್ಲದೆ ನಿಮಗೆ ಲಸಿಕೆಯನ್ನು ನೀಡಲಾಗುತ್ತದೆ ಎಂದು ಕೋರಿದ್ದಾರೆ. 

18ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ನೀಡಲು ಇನ್ನೂ ಕನಿಷ್ಠ 500 ಸರಕಾರಿ ಮತ್ತು ಖಾಸಗಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ವಿಳಂಬವಾದರೂ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ನೀಡಲಾಗುವುದು ಎಂದು ಅವರು ಭರವಸೆಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News