×
Ad

'ಶೂಟರ್ ದಾದಿ' ಚಂದ್ರೋ ತೋಮರ್ ಕೋವಿಡ್‍ಗೆ ಬಲಿ

Update: 2021-04-30 18:26 IST

ಹೊಸದಿಲ್ಲಿ: ಜಗತ್ತಿನ ಅತ್ಯಂತ ಹಿರಿಯ ಶಾರ್ಪ್ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ 89 ವರ್ಷದ  ಚಂದ್ರೋ ತೋಮರ್ ಕೋವಿಡ್ ಸೋಂಕಿಗೆ  ಇಂದು ಬಲಿಯಾಗಿದ್ದಾರೆ. ಎಪ್ರಿಲ್ 26ರಿಂದ ಅವರು ಮೀರತ್‍ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

"ಮೇರಾ ಸಾಥ್ ಛೂಟ್ ಗಯಾ, ಚಂದ್ರೋ ಕಹಾ ಚಲೀ ಗಯೀ (ಆಕೆ ನನ್ನನ್ನು ಅಗಲಿದ್ದಾರೆ. ಚಂದ್ರೋ ನೀವು ಎಲ್ಲಿ ಹೋದಿರಿ?") ಎಂದು ಆಕೆಯ ನಾದಿನಿ ಹಾಗೂ ಹಿರಿಯ ಮಹಿಳಾ ಶಾರ್ಪ್ ಶೂಟರ್ ಪ್ರಕಾಶಿ ತೋಮರ್ ಟ್ವೀಟ್ ಮಾಡಿ ತಮ್ಮ ದುಃಖ ತೋಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಭಾಗ್ಪತ್ ಗ್ರಾಮದವರಾಗಿದ್ದ ಚಂದ್ರೋ ಅವರು  60 ವರ್ಷ ದಾಟಿದ ನಂತರ  ಶೂಟಿಂಗ್‍ನಲ್ಲಿ ಆಸಕ್ತಿ ವಹಿಸಿದ್ದರಲ್ಲದೆ ಹಲವಾರು ರಾಷ್ಟ್ರ  ಮಟ್ಟದ ಪ್ರಶಸ್ತಿ ಗಳಿಸಿದ್ದರು. ಆಕೆಯ ಸಾಧನೆಯಿಂದ  ಸ್ಫೂರ್ತಿ ಪಡೆದು 'ಸಾಂದ್ ಕಿ ಆಂಖ್' ಎಂಬ ಬಾಲಿವುಡ್ ಚಿತ್ರವನ್ನೂ ತಯಾರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News