ರಾಜ್ಯಗಳಲ್ಲಿ 1 ಕೋಟಿಗೂ ಅಧಿಕ ಕೋವಿಡ್ ಲಸಿಕೆಯ ಡೋಸ್ ಉಳಿದಿದೆ: ಆರೋಗ್ಯ ಇಲಾಖೆ

Update: 2021-04-30 17:22 GMT

ಹೊಸದಿಲ್ಲಿ, ಎ.30: ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನೂ 1 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಉಳಿದಿದ್ದು ಮುಂದಿನ 3 ದಿನದೊಳಗೆ ಇನ್ನೂ 20 ಲಕ್ಷ ಡೋಸ್ ರಾಜ್ಯಗಳನ್ನು ತಲುಪಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ.

ಕೇಂದ್ರ ಸರಕಾರ ಇದುವರೆಗೆ 16,33,85,030 ಡೋಸ್ ಲಸಿಕೆಗಳನ್ನು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿದ್ದು ಶುಕ್ರವಾರ ಬೆಳಗ್ಗೆ 8 ಗಂಟೆಯವರೆಗಿನ ಮಾಹಿತಿಯಂತೆ ಒಟ್ಟು 15,33,56,503 ಡೋಸ್ ಲಸಿಕೆ(ವೇಸ್ಟೇಜ್ ಸೇರಿ) ಬಳಕೆಯಾಗಿದೆ. ಇನ್ನೂ 1,00,28,527 ಡೋಸ್ ಲಸಿಕೆ ಉಳಿದಿದೆ. ಮುಂದಿನ 3 ದಿನದಲ್ಲಿ 20 ಲಕ್ಷ ಡೋಸ್ ಲಸಿಕೆ ಪೂರೈಸಲಾಗುವುದು ಎಂದು ಆರೋಗ್ಯ ಇಲಾಖೆ ಹೇಳಿದೆ.

ಇದರಲ್ಲಿ ಮಹಾರಾಷ್ಟ್ರಕ್ಕೆ 1,63,62,470 ಡೋಸ್ ಲಸಿಕೆ ಪೂರೈಸಿದ್ದು ಇದರಲ್ಲಿ ವೇಸ್ಟೇಜ್ ಸಹಿತ 1,59,06,147 ಡೋಸ್ ಲಸಿಕೆ ಬಳಕೆಯಾಗಿದೆ. ರಾಜಸ್ತಾನಕ್ಕೆ 1,36,12,360 ಡೋಸ್ ಲಸಿಕೆ ಪೂರೈಸಿದ್ದು 1,33,70,102 ಡೋಸ್ ಲಸಿಕೆ ಬಳಕೆಯಾಗಿದೆ. 

ಉತ್ತರಪ್ರದೇಶಕ್ಕೆ 1,41,45,670 ಡೋಸ್ ಲಸಿಕೆ ಪೂರೈಕೆಯಾಗಿದ್ದು 1,28,08,993 ಡೋಸ್ ಲಸಿಕೆ ಬಳಕೆಯಾಗಿದೆ. ಪ.ಬಂಗಾಳಕ್ಕೆ 1,13,83,340 ಡೋಸ್ ಪೂರೈಸಿದ್ದು 1,10,42,745 ಡೋಸ್ ಲಸಿಕೆ ಬಳಕೆಯಾಗಿದೆ, ಕರ್ನಾಟಕಕ್ಕೆ 98,47,900 ಡೋಸ್ ಲಸಿಕೆ ಪೂರೈಕೆಯಾಗಿದ್ದು 94,13,568 ಡೋಸ್ ಲಸಿಕೆ ಬಳಕೆಯಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News