ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ನಂದಿಗ್ರಾಮದ ಫಲಿತಾಂಶದ ಬಗ್ಗೆ ಗೊಂದಲ: ಸುವೇಂದು ಅಧಿಕಾರಿ ವಿಜಯಿ ?

Update: 2021-05-02 15:35 GMT

ಹೊಸದಿಲ್ಲಿ: ನಂದಿಗ್ರಾಮ ವಿಧಾನಸಭಾ ಫಲಿತಾಂಶದ ಬಗ್ಗೆ ಹುಟ್ಟಿಕೊಂಡಿರುವ ಗೊಂದಲ ಇದೀಗ ವಿವಾದವನ್ನು ಸೃಷ್ಟಿಸಿದೆ. ಇಂದು ಸಂಜೆ 4:30ರ ಸುಮಾರಿಗೆ ಬಹುತೇಕ ರಾಷ್ಟ್ರೀಯ ಮಾಧ್ಯಮಗಳು ನಂದಿಗ್ರಾಮದಲ್ಲಿ ಮಮತಾ ಸುವೆಂದು ಅಧಿಕಾರಿಯನ್ನು 1200 ಮತಗಳಿಂದ  ಎಂದು ವರದಿ ಮಾಡಿದ್ದವು. ಆದರೆ ಇದೀಗ ಚುನಾವಣಾ ಆಯೋಗ ಬಿಜೆಪಿಯ ಸುವೆಂದು ಅಧಿಕಾರಿ ಮಮತಾರನ್ನು 1957 ಮತಗಳಿಂದ ಮಣಿಸಿದ್ದಾರೆ ಎಂದು  ಹೇಳಿದ್ದಾಗಿ ವರದಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ನಂದಿಗ್ರಾಮದ ಜನರ ತೀರ್ಪನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದು, ಚುನಾವಣಾ ಆಯೋಗದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.

ಈ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ, “ನಂದಿಗ್ರಾಮದ ಬಗ್ಗೆ ಚಿಂತಿಸಬೇಡಿ. ಹೋರಾಟಗಳನ್ನು ನಡೆಸುವಾಗ ಏನನ್ನಾದರೂ ತ್ಯಾಗ ಮಾಡಬೇಕಾಗುತ್ತದೆ. ನಾನು ನಂದಿಗ್ರಾಮಕ್ಕಾಗಿ ಹೋರಾಟ ನಡೆಸಿದೆ. ನಂದಿಗ್ರಾಮದ ಜನರು ಅವರ ತೀರ್ಪನ್ನು ನೀಡಿದ್ದಾರೆ. ನಾನದನ್ನು ಸ್ವೀಕರಿಸಿದ್ದೇನೆ” ಎಂದಿದ್ದಾರೆ.

ಈ ದಿಢೀರ್ ಬೆಳವಣಿಗೆಯ ಬಗ್ಗೆ ಗೊಂದಲ ಸೃಷ್ಟಿಯಾಗಿದ್ದು , ಆಯೋಗದ ನಡೆಯ ಬಗ್ಗೆ ನೆಟ್ಟಿಗರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News