×
Ad

ಚುನಾವಣಾ ಆಯೋಗದ ಸಹಾಯವಿಲ್ಲದಿದ್ದರೆ ಬಿಜೆಪಿ 50 ಸೀಟುಗಳನ್ನು ಕೂಡ ಗೆಲ್ಲುತ್ತಿರಲಿಲ್ಲ: ಮಮತಾ ಬ್ಯಾನರ್ಜಿ ಆರೋಪ

Update: 2021-05-02 21:54 IST

ಹೊಸದಿಲ್ಲಿ: ಚುನಾವಣೆಯ ಸಂದರ್ಭ ಚುನಾವಣಾ ಆಯೋಗವು ಬಿಜೆಪಿಯ ವಕ್ತಾರನಂತೆ ವರ್ತಿಸಿತ್ತು ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾಗಿ indiatoday.in ವರದಿ ಮಾಡಿದೆ.

ಚುನಾವಣಾ ಆಯೋಗದ ಸಹಾಯವಿಲ್ಲದಿದ್ದರೆ, ಬಿಜೆಪಿಯು 50 ಸೀಟುಗಳನ್ನು ಕೂಡ ಗೆಲ್ಲುತ್ತಿರಲಿಲ್ಲ ಎಂದವರು ಹೇಳಿದರು.

“ಈ ಬಾರಿ ಚುನಾವಣಾ ಆಯೋಗದ ವರ್ತನೆಯು ಭಯಾನಕವಾಗಿತ್ತು. ನಾವು 200ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಮತ್ತು ಬಿಜೆಪಿ 70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ನಾನು ಆರಂಭದಿಂದಲೇ ಹೇಳುತ್ತಿದ್ದೆ. ಚುನಾವಣಾ ಆಯೋಗವು ಸಹಾಯ ಮಾಡದಿದ್ದರೆ , ಬಿಜೆಪಿ 50 ಸ್ಥಾನಗಳನ್ನೂ ಗೆಲ್ಲುತ್ತಿರಲಿಲ್ಲ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News