ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೆ ಪಳನಿಸ್ವಾಮಿ ರಾಜೀನಾಮೆ

Update: 2021-05-03 07:22 GMT

ಚೆನ್ನೈ: ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಸೋಲನುಭವಿಸಿರುವ ಕಾರಣ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಳನಿಸ್ವಾಮಿ ಅವರು ಸಲೇಂ ನಿಂದ ತಮ್ಮ ಕಾರ್ಯದರ್ಶಿ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ರಾಜ್ಯಪಾಲರಿಗೆ ಪತ್ರವು ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲರ ಕಚೇರಿಯು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ನೂತನ ಸರಕಾರ ರಚನೆಯ ಬಗ್ಗೆ ತಯಾರಿ ನಡೆಸುತ್ತಿದೆ.

ಡಿಎಂಕೆ 125 ಸೀಟುಗಳನ್ನು ಗೆದ್ದುಕೊಂಡಿದ್ದರೆ, ಎಐಎಡಿಎಂಕೆ 65 ಸೀಟುಗಳನ್ನು ಗೆದ್ದುಕೊಂಡಿತ್ತು. 

ಮೇ 7ರಂದು ತಮಿಳುನಾಡು ಮುಖ್ಯಮಂತ್ರಿ ಪದವಿಗೇರಲಿರುವ ಎಂಕೆ ಸ್ಟಾಲಿನ್ ಗೆ ನಾನು ಅಭಿನಂದನೆ ಸಲ್ಲಿಸುವೆ ಎಂದು ಪಳನಿಸ್ವಾಮಿ ಟ್ವೀಟಿಸಿದ್ದಾರೆ.

ಉತ್ತಮ ತಮಿಳುನಾಡಿಗಾಗಿ ನಿಮ್ಮ ಸಲಹೆ ಸಹಕಾರ ಬೇಕು. ಸರಕಾರ ಹಾಗೂ ವಿರೋಧ ಪಕ್ಷದ ಸಂಯೋಜನೆಯೇ ಪ್ರಜಾಪ್ರಭುತ್ವ. ನಾನು ಪ್ರಜಾಪ್ರಭುತ್ವಕ್ಕೆ ಗೌರವ ನೀಡುವೆ ಎಂದು ಸ್ಟಾಲಿನ್ ಅವರು ಮರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News