×
Ad

ಉತ್ತರಪ್ರದೇಶ: ಬಾಯಿಯ ಮೂಲಕ ಕೃತಕ ಉಸಿರಾಟ ನೀಡಲು ಪುತ್ರಿಯರು ಪ್ರಯತ್ನಿಸಿದರೂ ತಾಯಿ ಮೃತ್ಯು !

Update: 2021-05-03 22:07 IST

ಲಕ್ನೋ, ಮೆ 2: ತಮ್ಮ ತಾಯಿಯ ಜೀವ ಉಳಿಸಿಕೊಳ್ಳಲು ಇಬ್ಬರು ಹೆಣ್ಣು ಮಕ್ಕಳು ಅವರ ಬಾಯಿಗೆ ಬಾಯಿ ಇರಿಸಿ ಕೃತಕ ಉಸಿರಾಟದ ಮೂಲಕ ಉಸಿರಾಟ ಸರಾಗಗೊಳಿಸಲು ಪ್ರಯತ್ನಿಸಿದ ಘಟನೆ ಉತ್ತರ ಪ್ರದೇಶದ ಬಹರಿಯಾಕ್ ಜಿಲ್ಲೆಯ ಸರಕಾರ ಆಸ್ಪತ್ರೆಯಲ್ಲಿ ನಡೆದಿದೆ. ಆದರೆ, ಅವರಿಗೆ ತಮ್ಮ ತಾಯಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಘಟನೆಯ ದೃಶ್ಯ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಈ ವೀಡಿಯೊದಲ್ಲಿ ಜನರು ಆಮ್ಲಜನಕ ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ದೂರುತ್ತಿರುವುದು ಕೇಳಿ ಬಂದಿದೆ. ಉಸಿರಾಟದ ತೊಂದರೆ ಎದುರಿಸುತ್ತಿದ್ದ ಮಹಿಳೆಯೋರ್ವರನ್ನು ಇಲ್ಲಿಗೆ ಕರೆ ತರಲಾಗಿತ್ತು. ಕೂಡಲೇ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದರು. ಆದರೆ, ಅವರು ಬದುಕಲಿಲ್ಲ ಎಂದು ತುರ್ತು ವೈದ್ಯಕೀಯ ಅಧಿಕಾರಿ ಎಹ್ತಿಸಾಮ್ ಅಲಿ ಅವರು ತಿಳಿಸಿದ್ದಾರೆ. 

ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೂಡಲೇ ಜಿಲ್ಲಾ ದಂಡಾಧಿಕಾರಿಶಂಭು ಕುಮಾರ್ ಹಾಗೂ ವೈದ್ಯಕೀಯ ಕಾಲೇಜಿನ ಹಿರಿಯ ವೈದ್ಯರು ಕೂಡಲೇ ಸ್ಥಳಕ್ಕೆ ತಲುಪಿದರು ಹಾಗೂ ಮಹಿಳೆಯನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಮಹಿಳೆಯನ್ನು ತುರ್ತು ನಿಗಾ ಘಟಕಕ್ಕೆ ರವಿವಾರ ತರಲಾಗಿತ್ತು. ಈ ಸಂದರ್ಭ ಅವರ ಸಂಬಂಧಿಕರು ಅವರ ಆರೋಗ್ಯ ತೀರಾ ಹದಗೆಟ್ಟಿದೆ ಎಂದು ತಿಳಿಸಿದ್ದರು. ವೈದ್ಯರು ಕೂಡಲೇ ಚಿಕಿತ್ಸೆ ಆರಂಭಿಸಿದರು. ಆದರೆ, ಅವರು ಮೃತಪಟ್ಟರು ಎಂದು ಮಹಾರಾಜ ಸುಖ್ದೇವ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಎ.ಕೆ. ಸಹಾನಿ ಹೇಳಿದ್ದಾರೆ. 

ವೈದ್ಯಕೀಯ ಕಾಲೇಜಿನಲ್ಲಿ ಆಮ್ಲಜನಕದ ಕೊರತೆ ಇಲ್ಲ ಎಂದು ಅವರು ಹೇಳಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News