ರಾಜಸ್ಥಾನದ ಮಾಜಿ ಲೆಗ್ ಸ್ಪಿನ್ನರ್ ವಿವೇಕ್ ಯಾದವ್ ಕೋವಿಡ್-19 ಗೆ ಬಲಿ

Update: 2021-05-07 07:52 GMT

ಜೈಪುರ: ರಾಜಸ್ಥಾನದ ಮಾಜಿ ಲೆಗ್ ಸ್ಪಿನ್ನರ್ ಹಾಗೂ  ರಣಜಿ ಟ್ರೋಫಿ ವಿಜೇತ ತಂಡದ ಸದಸ್ಯ ವಿವೇಕ್ ಯಾದವ್ ಅವರು ಕೊರೋನವೈರಸ್ ಸಂಬಂಧಿತ ಸಮಸ್ಯೆಗಳಿಂದ ಬುಧವಾರ ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು

ಯಾದವ್ ಅವರಿಗೆ 36 ವರ್ಷ ವಯಸ್ಸಾಗಿದ್ದು, ಅವರಿಗೆ ಪತ್ನಿ ಮತ್ತು ಮಗಳು ಇದ್ದಾರೆ.

ರಾಜಸ್ಥಾನ ರಣಜಿ ಆಟಗಾರ ಮತ್ತು ಆತ್ಮೀಯ ಸ್ನೇಹಿತ… ವಿವೇಕ್ ಯಾದವ್ ಇನ್ನಿಲ್ಲ. ಅವರ ಆತ್ಮಕ್ಕೆ ಶ್ರದ್ದಾಂಜಲಿ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದಾರೆ.

ಯಾದವ್ 18 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಒಟ್ಟು  57 ವಿಕೆಟ್ ಗಳನ್ನು ಪಡೆದಿದ್ದಾರೆ. 2010-11 ರಣಜಿ ಟ್ರೋಫಿ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಅವರ ವೃತ್ತಿಜೀವನದ ಸ್ಮರಣೀಯ ಕ್ಷಣವಾಗಿತ್ತು.

ಯಾದವ್ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದು  ಅವರು ಕೀಮೋಥೆರಪಿಗಾಗಿ ಆಸ್ಪತ್ರೆಗೆ ಹೋಗಿದ್ದರು, ಅಲ್ಲಿ ಅವರನ್ನು ಪರೀಕ್ಷಿಸಲಾಗಿದ್ದು,  ಕೋವಿಡ್-19 ಸೋಂಕು ತಗಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News