×
Ad

ಕೊರೋನದ 3ನೇ ಅಲೆಗೆ ಮುಂಬೈ ಸಿದ್ಧತೆ: ಚೈಲ್ಡ್ ಕೋವಿಡ್ ಸೆಂಟರ್ ಸ್ಥಾಪನೆ

Update: 2021-05-07 15:03 IST

ಮುಂಬೈ: ಮಕ್ಕಳ ಮೇಲೆ ಕೆಟ್ಟ ಪರಿಣಾಮಬೀರುವ ಸಾಧ್ಯತೆ ಇರುವ ಮೂರನೇ ಅಲೆಯ ಕೋರೋನ ಸೋಂಕುಗಳಿಗೆ ಪೂರ್ವಸಿದ್ಧತೆ ನಡೆಸುತ್ತಿರುವ  ಮಹಾರಾಷ್ಟ್ರ ಸರಕಾರವು  ಮಕ್ಕಳ ಕೋವಿಡ್ ಕೇಂದ್ರಗಳನ್ನು ಹಾಗೂ ಮಕ್ಕಳ ಕಾರ್ಯಪಡೆಯೊಂದನ್ನು ಸ್ಥಾಪಿಸುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವರು ಶುಕ್ರವಾರ ತಿಳಿಸಿದ್ದಾರೆ.

"ಮೂರನೇ ಕೊರೋನ ಅಲೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾರಕವಾಗಬಹುದು. ನಾವು ಮಕ್ಕಳ ಕೋವಿಡ್ ಆರೈಕೆ ಕೇಂದ್ರಗಳನ್ನು ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಮಕ್ಕಳಿಗೆ ವಿಭಿನ್ನ ವೆಂಟಿಲೇಟರ್ ಹಾಸಿಗೆಗಳು ಮತ್ತು ಇತರ ವೈದ್ಯಕೀಯ ಉಪಕರಣಗಳು ಬೇಕಾಗುತ್ತವೆ" ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಸುದ್ದಿಗಾರರಿಗೆ ತಿಳಿಸಿದರು.

ಭಾರತದಲ್ಲಿ ಮಕ್ಕಳಿಗೆ ಯಾವುದೇ ಲಸಿಕೆಗಳಿಲ್ಲ.

ಕೆನಡಾದಲ್ಲಿ ಮಕ್ಕಳಿಗೆ ಫೈಝರ್‌ನ ಲಸಿಕೆಯನ್ನು ಅನುಮೋದಿಸಲಾಗಿದೆ ಹಾಗೂ ಅಮೆರಿಕದಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ ಲಸಿಕೆ ಅನ್ನು ಅನುಮತಿ ನೀಡುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News