×
Ad

ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಸರ್ಬಾನಂದ ಸೋನೊವಾಲ್ ರಾಜೀನಾಮೆ

Update: 2021-05-09 12:32 IST

ಗುವಾಹಟಿ: ನಿರ್ಗಮನ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ರವಿವಾರ ರಾಜ್ಯಪಾಲ ಜಗದೀಶ್  ಮುಖಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಸೋನೊವಾಲ್ ಅವರು ಪಕ್ಷದ ಉನ್ನತ ನಾಯಕರೊಂದಿಗೆ ಚರ್ಚಿಸಲು ಶನಿವಾರ ದಿಲ್ಲಿಗೆ ತೆರಳಿದ್ದರು. ದಿಲ್ಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯ ನಾಯಕತ್ವದ ವಿಚಾರವಾಗಿ ಚರ್ಚಿಸಿದ್ದರು.

ಅಸ್ಸಾಂ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸೋನೊವಾಲ್ ಹಾಗೂ ಪ್ರಭಾವಿ ನಾಯಕ ಹಿಮಂತ ಬಿಸ್ವಾ ಶರ್ಮಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.  ಹಿಮಂತ ಶರ್ಮಾಗೆ ಹೊಸದಾಗಿ ಆಯ್ಕೆಯಾಗಿರುವ ಹೆಚ್ಚಿನ ಶಾಸಕರ ಬೆಂಬಲವಿರುವ ಕಾರಣ ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ಅವರು ಮುಂದಿದ್ದಾರೆ.  ಸೋನೊವಾಲ್ ಗೆ ಯಾವ ಜವಾಬ್ದಾರಿ ನೀಡಲಾಗುತ್ತದೆ ಎಂಬ ಪ್ರಶ್ನೆ ಎದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News