ನಗರಗಳ ನಂತರ ಈಗ ಗ್ರಾಮಗಳು ದೇವರನ್ನು ಅವಲಂಬಿಸಿವೆ: ರಾಹುಲ್ ಗಾಂಧಿ

Update: 2021-05-09 17:12 GMT

ಹೊಸದಿಲ್ಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಈಗ ಗ್ರಾಮೀಣ ಪ್ರದೇಶದಲ್ಲಿ ವೇಗವಾಗಿ ಹರಡುತ್ತಿರುವುದರಿಂದ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಇಂದು ನಗರಗಳಷ್ಟೇ ಅಲ್ಲ, ಹಳ್ಳಿಗಳೂ ಸಹ ದೇವರ ಕರುಣೆಯನ್ನು ಅವಲಂಬಿಸಿವೆ ಎಂದು ಹೇಳಿದರು.

ಈ ಕುರಿತು ಟ್ವೀಟ್ ಮಾಡಿರುವ  ಕಾಂಗ್ರೆಸ್ ಮುಖಂಡರು ಭಾರತೀಯ ಹಳ್ಳಿಗಳಲ್ಲಿ ಕೋವಿಡ್-19 ಪ್ರಕರಣಗಳು ಶೀಘ್ರವಾಗಿ ಹೆಚ್ಚುತ್ತಿರುವ ಬಗ್ಗೆ ಮಾಧ್ಯಮ ವರದಿಯನ್ನು ಉಲ್ಲೇಖಿಸಿದ್ದಾರೆ.

"ನಗರಗಳ ನಂತರ, ಗ್ರಾಮಗಳು ಈಗ ದೇವರ ಮೇಲೆ ಅವಲಂಬಿತವಾಗಿವೆ (ಪರಮಾತ್ಮ ನಿರ್ಭರ್)" ಎಂದು  ಗಾಂಧಿ ಟ್ವೀಟ್ ಮಾಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿಭಾಯಿಸದೇ ಇರುವುದಕ್ಕೆ ರಾಹುಲ್ ಅವರು ಕೇಂದ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಪದೇ ಪದೇ ಟೀಕಿಸುತ್ತಿದ್ದಾರೆ.

ಮೇ 7 ರಂದು, ರಾಹುಲ್  ದೇಶದಲ್ಲಿ ನಡೆಯುತ್ತಿರುವ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News