"ಕೇರಳಕ್ಕೆ ಹೆಚ್ಚಿನ ಆಕ್ಸಿಜನ್‌ ಅವಶ್ಯಕತೆಯಿದೆ, ಇತರ ರಾಜ್ಯಗಳಿಗೆ ನೀಡಲಾಗುವುದಿಲ್ಲ"

Update: 2021-05-10 11:21 GMT

ತಿರುವನಂತಪುರಂ: "ನಮ್ಮಲ್ಲಿ ಅವಶ್ಯಕತೆಗಿಂತ ಹೆಚ್ಚಿದ್ದ ಆಕ್ಸಿಜನ್‌ ಅನ್ನು ಈಗಾಗಲೇ ನಾವು ಹಲವು ರಾಜ್ಯಗಳಿಗೆ ಪೂರೈಸಿದ್ದೇವೆ. ಇದೀಗ ಕೇವಲ 86 ಮೆಟ್ರಿಕ್‌ ಟನ್‌ ಗಳಷ್ಟು ಸ್ಟಾಕ್‌ ಆಕ್ಸಿಜನ್‌ ಮಾತ್ರ ಉಳಿದಿದ್ದು, ಇನ್ನು ಯಾವುದೇ ರಾಜ್ಯಗಳಿಗೆ ಹೆಚ್ಚುವರಿ ಆಕ್ಸಿಜನ್‌ ಪೂರೈಸಲು ಸಾಧ್ಯವಿಲ್ಲ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರಕಾರ ಆದೇಶಿಸಿದಂತೆ ಮೇ 10ರವರೆಗೆ ತಮಿಳುನಾಡಿಗೆ 40 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಪೂರೈಕೆ ಮಾಡಿರುವುದಾಗಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈಗಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಇತರ ರಾಜ್ಯಗಳಿಗೆ ಆಕ್ಸಿಜನ್‌ ಪೂರೈಸುವುದು ನಮಗೆ ಅಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. 

ಕೇರಳದಲ್ಲಿ ಪ್ರಸ್ತುತ 4,02,640 ಸಕ್ರಿಯ ಪ್ರಕರಣಗಳಿವೆ, ಮತ್ತು ಮೇ 15 ರ ವೇಳೆಗೆ ಈ ಸಂಖ್ಯೆ 6,00,000 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ವೇಗವಾಗಿ ಬೆಳೆಯುತ್ತಿರುವ ಸಂಖ್ಯೆಗಳ ದೃಷ್ಟಿಯಿಂದ, ಮೇ 15 ರ ವೇಳೆಗೆ ರಾಜ್ಯಕ್ಕೆ 450 ಮೆಟ್ರಿಕ್ ಟನ್ ಆಮ್ಲಜನಕ ಬೇಕಾಗುತ್ತದೆ.

ರಾಜ್ಯದ ಪ್ರಮುಖ ಆಮ್ಲಜನಕ ಉತ್ಪಾದನಾ ಘಟಕವೆಂದರೆ ಐನಾಕ್ಸ್, ಇದು ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿದೆ. ಇದರ ಒಟ್ಟು ಉತ್ಪಾದನಾ ಸಾಮರ್ಥ್ಯ 150 ಮೆಟ್ರಿಕ್ ಟನ್ ಮತ್ತು ಇತರ ಸಣ್ಣ ಘಟಕಗಳೊಂದಿಗೆ ರಾಜ್ಯವು ಪ್ರತಿದಿನ 219 ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸುತ್ತಿದೆ ಎಂದು ಪಿಣರಾಯಿ ವಿಜಯನ್ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News