"ನದಿಯಲ್ಲಿ ಮೃತದೇಹಗಳು ತೇಲಿಬರುತ್ತಿವೆ, ನಿಮಗೆ ಸೆಂಟ್ರಲ್‌ ವಿಸ್ತಾ ಮಾತ್ರ ಕಾಣಿಸುತ್ತಿದೆ"

Update: 2021-05-11 18:26 GMT

ಹೊಸದಿಲ್ಲಿ: ನದಿಯಲ್ಲಿ ತೇಲಿ ಬರುತ್ತಿರುವ ಮೃತದೇಹಗಳು ಹಾಗೂ ರೋಗಿಗಳನ್ನು ಬಸವಳಿಯುವಂತೆ ಮಾಡುವ ಸರತಿ ಸಾಲುಗಳ ಬಗ್ಗೆ ಮಂಗಳವಾರ ತನ್ನ ಟ್ವೀಟ್ನಲ್ಲಿ ಬೆಳಕು ಬೀರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೊರೋನ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ನಡುವೆ ಸೆಂಟ್ರಲ್ ವಿಸ್ತಾ ಯೋಜನೆಯ ಕಾಮಗಾರಿಯನ್ನು ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘‘ನದಿಯಲ್ಲಿ ಅಸಂಖ್ಯಾತ ಮೃತದೇಹಗಳು ತೇಲಿ ಬರುತ್ತಿವೆ. ಆಸ್ಪತ್ರೆಗಳ ಎದುರು ಮೈಲುಗಟ್ಟಲೆ ಸರತಿ ಸಾಲಿದೆ. ಬದುಕುವ ಹಕ್ಕಿನ ಭದ್ರತೆ ಇಲ್ಲದಾಗಿದೆ ! ಪ್ರಧಾನಿ ಅವರು ತನ್ನ ಪಿಂಕ್ ಕನ್ನಡಕವನ್ನು ತೆಗೆಯದೇ ಇದ್ದರೆ, ಸೆಂಟ್ರಲ್ ವಿಸ್ತಾ ಹೊರತುಪಡಿಸಿ ಬೇರೇನೂ ಕಾಣಿಸದು’’ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News