ಮೃತಪಟ್ಟ ಕೋವಿಡ್ ವಾರಿಯರ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಧನ ಘೋಷಿಸಿದ ತಮಿಳುನಾಡು ಸರಕಾರ

Update: 2021-05-12 16:51 GMT

ಚೆನ್ನೈ, ಮೇ 12: ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಕೋವಿಡ್ನಿಂದ ಮೃತಪಟ್ಟ 43 ವೈದ್ಯಕೀಯ ವೃತ್ತಿಪರರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬುಧವಾರ ಘೋಷಿಸಿದ್ದಾರೆ. ಎಪ್ರಿಲ್, ಮೇ ಹಾಗೂ ಜೂನ್ನಲ್ಲಿ ಕೋವಿಡ್ ಕರ್ತವ್ಯದಲ್ಲಿ ಭಾಗಿಯಾದ ವೈದ್ಯರು, ನರ್ಸ್, ಅರೆ ವೈದ್ಯಕೀಯ ಸಿಬ್ಬಂದಿ, ಇತರ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕಾರ್ಯಕರ್ತರಿಗೆ ಪ್ರೋತ್ಸಾಹಕ ಧನಗಳನ್ನು ಡಿಎಂಕೆ ಘೋಷಣೆ ಮಾಡಿದೆ.

ವೈದ್ಯರು 30 ಸಾವಿರ ರೂಪಾಯಿ, ದಾದಿಯರು ಹಾಗೂ ತರಬೇತು ವೈದ್ಯರು 20 ಸಾವಿರ ರೂಪಾಯಿ, ಸ್ವಚ್ಛತಾ ಕಾರ್ಮಿಕರು, ಸಿಟಿ ಸ್ಕಾನ್ ವಿಭಾಗದ ಸಿಬ್ಬಂದಿ ಹಾಗೂ ಆ್ಯಂಬುಲೆನ್ಸ್ನಲ್ಲಿ ಕಾರ್ಯ ನಿರ್ವಹಿಸುವಂತಹ ಇತರ ಸಿಬ್ಬಂದಿ 15 ಸಾವಿರ ರೂಪಾಯಿ ಪ್ರೋತ್ಸಾಹಕ ಧನ ಪಡೆಯಲಿದ್ದಾರೆ. ಸಾಂಕ್ರಾಮಿಕ ರೋಗ ನಿಯಂತ್ರಿಸಲು ಶ್ರಮಿಸುತ್ತಿರುವ ಸ್ನಾತಕೋತ್ತರ ಪದವೀಧರರು ಕೂಡ 20 ಸಾವಿರ ರೂಪಾಯಿ ಪ್ರೋತ್ಸಾಹ ಧನ ಪಡೆಯಲಿದ್ದಾರೆ ಎಂದು ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News