×
Ad

2ರಿಂದ 18ರ ವಯಸ್ಸಿನವರಿಗೆ ಕೋವ್ಯಾಕ್ಸಿನ್ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ ಅನುಮತಿ

Update: 2021-05-13 10:48 IST

ಹೊಸದಿಲ್ಲಿ: ಎರಡು ವಯಸ್ಸಿನ ಮಕ್ಕಳಿಂದ 18 ವರ್ಷದೊಳಗಿನವರಿಗೆ ಕೋವಾಕ್ಸಿನ್‌ನ ಎರಡು ಹಾಗೂ ಮೂರನೇ ಹಂತ ದ ಕ್ಲಿನಿಕಲ್ ಪ್ರಯೋಗ ನಡೆಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ.

525 ಆರೋಗ್ಯವಂತ ಸ್ವಯಂಸೇವಕರಲ್ಲಿ ಪ್ರಯೋಗಗಳನ್ನು ನಡೆಸಲಾಗುವುದು ಎಂದು ಕೋವಾಕ್ಸಿನ್ ಅನ್ನು ಉತ್ಪಾದಿಸುವ ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆಯು  ತಿಳಿಸಿದೆ.

ಸರಕಾರದ ಹೇಳಿಕೆಯ ಪ್ರಕಾರ, ಲಸಿಕೆಗಳ ಬಗ್ಗೆ ತಜ್ಞರ ಸಮಿತಿಯ ಶಿಫಾರಸನ್ನು ಔಷಧಿ ನಿಯಂತ್ರಕ (ಡಿಜಿಸಿಐ) ಒಪ್ಪಿಕೊಂಡಿದೆ.

ಪ್ರಯೋಗದ ಸಮಯದಲ್ಲಿ  ಲಸಿಕೆಯ ಎರಡು ಡೋಸ್ ಗಳನ್ನು  0 ಮತ್ತು 28 ನೇ ದಿನದಲ್ಲಿ ಚುಚ್ಚಲಾಗುತ್ತದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News