×
Ad

ನದಿಗಳಲ್ಲಿ ತೇಲಿ ಬರುತ್ತಿರುವ ಮೃತದೇಹಗಳು: ಕಳವಳ ವ್ಯಕ್ತಪಡಿಸಿ ಸರಕಾರದ ವಿರುದ್ಧ ಕಿಡಿ ಕಾರಿದ ಫರ್ಹಾನ್ ಅಖ್ತರ್

Update: 2021-05-13 20:50 IST

ಮುಂಬೈ: ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಗಂಗಾ ನದಿಯಲ್ಲಿ ಹಲವಾರು ಮೃತದೇಹಗಳು ತೇಲಿ ಬರುತ್ತಿರುವ ಆಘಾತಕರ ಬೆಳವಣಿಗೆ ಕುರಿತು ಬಾಲಿವುಡ್ ನಟ ಹಾಗೂ ಚಿತ್ರ ತಯಾರಕ ಫರ್ಹಾನ್ ಅಖ್ತರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರಲ್ಲದೆ  ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಮೃತದೇಹಗಳು ತೇಲಿ ಬರುತ್ತಿರುವ ವೀಡಿಯೋ  ಮತ್ತು  ಫೋಟೋಗಳು 'ಹೃದಯವಿದ್ರಾವಕ' ಎಂದು ಬಣ್ಣಿಸಿದ ಅವರು 'ವ್ಯವಸ್ಥೆಯ ವೈಫಲ್ಯಕ್ಕೆ ಹೊಣೆಗಾರಿಕೆಯನ್ನು ಸಂಬಂಧಿತರು ವಹಿಸಿಕೊಳ್ಳಬೇಕಿದೆ' ಎಂದಿದ್ದಾರೆ. ಈ  ಬೆಳವಣಿಗೆ ಕುರಿತು ಬಾಲಿವುಡ್ಡಿನಿಂದ ಫರ್ಹಾನ್ ಅಖ್ತರ್ ಅವರ ಪ್ರತಿಕ್ರಿಯೆಯೇ ಮೊದಲಿನದ್ದಾಗಿದೆ.

"ನದಿಗಳಲ್ಲಿ ತೇಳಿ ಬರುತ್ತಿರುವ ಹಲವಾರು ಮೃತದೇಹಗಳು  ನಿಜವಾಗಿಯೂ ಹೃದಯವಿದ್ರಾವಕ. ಈ ವೈರಸ್ ಒಂದು ದಿನ ಸೋಲಲಿದೆ ಆದರೆ ವ್ಯವಸ್ಥೆಯಲ್ಲಿನ ವೈಫಲ್ಯಗಳಿಗೆ ಹೊಣೆಗಾರಿಕೆ ಹೊರಬೇಕಾಗಿದೆ. ಅಲ್ಲಿಯ ತನಕ ಈ ಸಾಂಕ್ರಾಮಿಕದ ಅಧ್ಯಾಯ ಮುಕ್ತಾಗೊಳ್ಳದು" ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News