ಕೇರಳದಲ್ಲಿ ಲಾಕ್ ಡೌನ್ ಮೇ 23ರ ತನಕ ವಿಸ್ತರಣೆ

Update: 2021-05-14 14:28 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಕೇರಳದಲ್ಲಿ  ಕೋವಿಡ್-19 ಲಾಕ್‌ಡೌನ್ ಅನ್ನು ಮೇ 23 ರವರೆಗೆ ಒಂದು ವಾರ ವಿಸ್ತರಿಸಲಾಗಿದೆ.  ನಾಲ್ಕು ಜಿಲ್ಲೆಗಳಾದ ತಿರುವನಂತಪುರಂ, ತ್ರಿಶೂರ್, ಎರ್ನಾಕುಲಂ ಮತ್ತು ಮಲಪ್ಪುರಂ ನಲ್ಲಿ "ಟ್ರಿಪಲ್ ಲಾಕ್‌ಡೌನ್" ಅಡಿಯಲ್ಲಿ  ಹಾಗೂ ಇತರ 10  ಜಿಲ್ಲೆಗಳಲ್ಲಿ  ಹೆಚ್ಚು ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ.

ಇತ್ತೀಚಿನ ವಾರಗಳಲ್ಲಿ ರಾಜ್ಯದಲ್ಲಿ ಸೋಂಕುಗಳ ಸಂಖ್ಯೆಯಲ್ಲಿ ನಾಟಕೀಯ ಏರಿಕೆಯಾದ ನಂತರ ವಿಧಿಸಲಾದ ಲಾಕ್‌ಡೌನ್ ಮೇ 8 ರಂದು ಆರಂಭವಾಯಿತು. 16 ರಂದು ಲಾಕ್ ಡೌನ್ ಕೊನೆಗೊಳ್ಳಬೇಕಾಗಿತ್ತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇಂದು ನೀಡಿರುವ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ 34,694 ಹೊಸ ಕೋವಿಡ್ ಪ್ರಕರಣಗಳು ಹಾಗೂ  ರೋಗಕ್ಕೆ ಸಂಬಂಧಿಸಿ 93 ಸಾವು ಸಂಭವಿಸಿದೆ.

ಮೇ 17 ರ ಸೋಮವಾರದಿಂದ 18-45 ವಯೋಮಾನದವರಿಗೆ ವ್ಯಾಕ್ಸಿನೇಷನ್ ಪ್ರಾರಂಭವಾಗಲಿದೆ ಎಂದು ವಿಜಯನ್ ಹೇಳಿದರು. ಈ ವರ್ಗಕ್ಕೆ ನೋಂದಣಿ ನಾಳೆ ಪ್ರಾರಂಭವಾಗಲಿದೆ. ಕಂಪನಿಯಿಂದ ನೇರವಾಗಿ ಆದೇಶಿಸಲಾದ ರ ಮೊದಲ ಬ್ಯಾಚ್ ಕೋವಿಶೀಲ್ಡ್ ಲಸಿಕೆಗಳು ಕಳೆದ ಸೋಮವಾರ ಕೊಚ್ಚಿಗೆ ಬಂದಿದ್ದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News