ವ್ಯಾಪಕ ಲಸಿಕಾ ಅಭಿಯಾನವೇ ಭಾರತದ ಕೊರೋನ ಬಿಕ್ಕಟ್ಟಿಗಿರುವ ಏಕೈಕ ಪರಿಹಾರ

Update: 2021-05-14 15:18 GMT
ಪೋಟೊ  ಕೃಪೆ://twitter.com/

ವಾಶಿಂಗ್ಟನ್, ಮೇ 14: ಲಸಿಕಾ ಅಭಿಯಾನವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸುವುದು ಭಾರತದಲ್ಲಿ ಈಗ ನೆಲೆಸಿರುವ ಕೊರೋನ ವೈರಸ್ ಬಿಕ್ಕಟ್ಟನ್ನು ನಿಭಾಯಿಸುವ ಏಕೈಕ ವಿಧಾನವಾಗಿದೆ ಹಾಗೂ ಈ ನಿಟ್ಟಿನಲ್ಲಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ಗಳ ನಡುವಿನ ಅಂತರವನ್ನು ವಿಸ್ತರಿಸುವುದು ಸರಿಯಾದ ಕ್ರಮವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ರ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆ್ಯಂಟನಿ ಫೌಚಿ ಹೇಳಿದ್ದಾರೆ.

ಭಾರತದಲ್ಲಿ ಈಗ ಇರುವಂಥ ಪರಿಸ್ಥಿತಿಯನ್ನು ನಿಭಾಯಿಸುವ ವಿಧಾನವೆಂದರೆ ಹೆಚ್ಚೆಚ್ಚು ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಹಾಕುವುದು. ಲಸಿಕೆ ಅಭಿಯಾನವನ್ನು ತೀವ್ರಗೊಳಿಸುವ ವಿಧಾನಗಳನ್ನು ಹುಡುಕಬೇಕಾಗಿದೆ. ಇದೇ ಸರಿಯಾದ ವಿಧಾನವೆಂದು ನನಗನಿಸುತ್ತದೆ ಎಂದು ಗುರುವಾರ ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಡಾ. ಫೌಚಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News