×
Ad

ಇಸ್ರೇಲ್‌ ಪ್ರಧಾನಿ ʼಧನ್ಯವಾದʼ ಹೇಳಿದ ದೇಶಗಳ ಪಟ್ಟಿಯಲ್ಲಿ ಭಾರತವಿಲ್ಲ: ಬೆಂಬಲಿಗರ ಕುರಿತು ಟ್ವಿಟರ್‌ ನಲ್ಲಿ ವ್ಯಂಗ್ಯ

Update: 2021-05-16 17:59 IST

ಹೊಸದಿಲ್ಲಿ: ಇಸ್ರೇಲ್‌ ರಾಷ್ಟ್ರವು ಪಕ್ಕದ ಫೆಲೆಸ್ತೀನ್‌ ನ ಗಾಝಾ ಪಟ್ಟಿಯೆಡೆಗೆ ರಾಕೆಟ್‌ ಗಳನ್ನು ಹಾರಿಸುತ್ತಿದ್ದು, ಹಲವಾರು ಸಾವುನೋವುಗಳು ಸಂಭವಿಸಿದೆ. ಮಕ್ಕಳೂ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಇಸ್ರೇಲ್‌ ಮತ್ತು ಫೆಲೆಸ್ತೀನ್‌ ಸಂಘರ್ಷದ ನಡುವೆ ಭಾರತೀಯ ಬಲಪಂಥೀಯರು ಇಸ್ರೇಲ್‌ ಗೆ ಬೆಂಬಲ ವ್ಯಕ್ತಪಡಿಸಿದ್ದು, ಇದೀಗ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಟ್ವೀಟ್‌ ಬಳಿಕ ಬಲಪಂಥೀಯರು ನಗೆಪಾಟಲಿಗೀಡಾಗಿದ್ದಾರೆ.

ಬ್ರೆಝಿಲ್‌, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳ ಪತಾಕೆಗಳ ಇಮೋಜಿಯನ್ನು ತಮ್ಮ ಟ್ವೀಟ್‌ ನಲ್ಲಿ ಉಲ್ಲೇಖಿಸಿರುವ ನೆತನ್ಯಾಹು, ಭಯೋತ್ಪಾದಕರಿಂದ ಇಸ್ರೇಲ್‌ ಮೇಲಾಗುತ್ತಿರುವ ದಾಳಿಯ ಸಂದರ್ಭದಲ್ಲಿ ನಮ್ಮ ಆತ್ಮರಕ್ಷಣೆಯ ಹಕ್ಕಿನೊಂದಿಗೆ ಜೊತೆಗೆ ನಿಂತ ರಾಷ್ಟ್ರಗಳಿಗೆ ಧನ್ಯವಾದ" ಎಂದು ಬರೆದಿದ್ದರು.

ನಿಮಗೆ ಬಹುಶಃ ಭಾರತದ ಬಾವುಟವನ್ನು ಉಲ್ಲೇಖಿಸಲು ಮರೆತಿದ್ದಿರಬಹುದು, ನಾವು ನಿಮ್ಮ ಜೊತೆ ನಿಂತಿದ್ದೇವೆಂದು ಹಲವು ಬಲಪಂಥೀಯರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು "ಇಸ್ರೇಲ್‌ ಫೆಲೆಸ್ತೀನ್‌ ನಿಂದ ಆಕ್ರಮಿಸಿದ ಭೂಭಾಗಗಳನ್ನು ಮರಳಿ ನೀಡಬೇಕು" ಎಂದು ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಮಾಡಿದ್ದ ಪ್ರಭಾಷಣದ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. "ಭಾರತದ ಬಲಪಂಥೀಯರಿಗೆ ಇಸ್ರೇಲ್‌ ಪ್ರಧಾನಿ ಅನ್ಯಾಯ ಮಾಡಿದ್ದಾರೆ" ಎಂದು ಇನ್ನು ಕೆಲ ಬಳಕೆದಾರರು ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News