ಕೇಂದ್ರ ಸಚಿವರ ಪೂರ್ವಜರ ಗ್ರಾಮದಲ್ಲಿ2 ವಾರದಲ್ಲಿ 30ಕ್ಕೂ ಅಧಿಕ ಮಂದಿ ಮೃತ್ಯು

Update: 2021-05-16 17:50 GMT

ಭಿವಾನಿ: ಕಳೆದ ಎರಡು ವಾರಗಳಲ್ಲಿ ಕೇಂದ್ರ ಸಚಿವ ವಿ. ಕೆ.  ಸಿಂಗ್ ಅವರ ಪೂರ್ವಜರ ಗ್ರಾಮವಾದ ಬಪೋರಾದಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.  ಹೆಚ್ಚಿನ ಸಂಖ್ಯೆಯ ಸಾವುಗಳಿಗೆ  ಕೋವಿಡ್ -19 ಕಾರಣವಾಗಿರಬಹುದು ಎಂದು ಗ್ರಾಮದ ಸರಪಂಚ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಜನರಲ್ಲಿ ಅನೇಕರಿಗೆ ಕೋವಿಡ್  ರೋಗದ ಲಕ್ಷಣಗಳು ಗೋಚರಿಸಿತ್ತು., ಆದರೆ ಕೇವಲ ಮೂವರಲ್ಲಿ ಮಾತ್ರ  ಪಾಸಿಟಿವ್ ಕಂಡುಬಂದಿತ್ತು ಎಲ್ಲರೂ  ಜ್ವರ ಹಾಗೂ ಕೆಮ್ಮಿನಂತಹ ರೋಗಲಕ್ಷಣಗಳನ್ನು ಹೊಂದಿದ್ದರು ಆದರೆ ಅವರು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಲಿಲ್ಲ. ಆದ್ದರಿಂದ ಅವರ ಸಾವಿನ ಹಿಂದಿನ ನಿಜವಾದ ಕಾರಣ ತಿಳಿದುಬಂದಿಲ್ಲ" ಎಂದು ಗ್ರಾಮದ ಮುಖ್ಯಸ್ಥ ನರೇಶ್ ಕುಮಾರ್ ಅವರು  ಹೇಳಿದರು.

ಜಿಲ್ಲಾ ಅಧಿಕಾರಿಗಳು ಭಿವಾನಿ ಜಿಲ್ಲೆಯ ಗ್ರಾಮದಲ್ಲಿ ಆಂಬ್ಯುಲೆನ್ಸ್ ಇರಿಸಿದ್ದಾರೆ ಹಾಗೂ  ಎಲ್ಲಾ ನಿವಾಸಿಗಳಿಗೆ ರೋಗವನ್ನು ತಪಾಸಣೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದೇ ದಿನ ಗ್ರಾಮದಲ್ಲಿ ಏಳು ಅಥವಾ ಎಂಟು ಸಾವುಗಳು ಸಂಭವಿಸಿವೆ ಮತ್ತು ಎಲ್ಲಾ ಶ್ಮಶಾನವು ತುಂಬುತುಳುಕಿದ್ದವು. ಇದು ಗ್ರಾಮಸ್ಥರಿಗೆ ಭಯ ಹುಟ್ಟಿಸುತ್ತದೆ. ಕೊರೋನವೈರಸ್ ಪರೀಕ್ಷೆಗೆ ಒಳಗಾಗಲು ಅನೇಕ ಗ್ರಾಮಸ್ಥರು ಹಿಂದೇಟು ಹಾಕಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News