ಉತ್ತರಾಖಂಡ: 9 ವರ್ಷಕ್ಕಿಂತ ಕೆಳಗಿನ ಸಾವಿರ ಮಕ್ಕಳಿಗೆ ಕೊರೋನ ಸೋಂಕು

Update: 2021-05-16 19:17 GMT

ಡೆಹ್ರಾಡೂನ್, ಮೇ 15: ಉತ್ತರಾಖಂಡದಲ್ಲಿ ಕಳೆದ 10 ದಿನಗಳಲ್ಲಿ 9 ವರ್ಷಕ್ಕಿಂತ ಕೆಳಗಿನ ಪ್ರಾಯದ ಸುಮಾರು 1 ಸಾವಿರ ಮಕ್ಕಳಿಗೆ ಕೊರೋನ ಸೋಂಕು ತಗುಲಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೆಲವು ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ವರ್ಷ ಕೇವಲ 2,131 ಮಕ್ಕಳು ಕೊರೋನ ಸೋಂಕಿಗೆ ತುತ್ತಾಗಿದ್ದರು. ಎಪ್ರಿಲ್ 1ರಿಂದ ಎಪ್ರಿಲ್ 15ರ ವರೆಗೆ 264 ಮಕ್ಕಳು ಕೊರೋನ ಸೋಂಕಿಗೆ ಒಳಗಾಗಿದ್ದರು. ಎಪ್ರಿಲ್ 16ರಿಂದ ಎಪ್ರಿಲ್ 30ರ ವರೆಗೆ 1,053 ಪ್ರಕರಣಗಳು ಹಾಗೂ ಮೇ 1ರಿಂದ ಮೇ 14ರ ವರೆಗೆ 1,618 ಪ್ರಕರಣಗಳು ದಾಖಲಾಗಿದ್ದವು ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News