×
Ad

ನಾನು ಹೆಚ್ಚು ಮಾತನಾಡಿದರೆ ದೇಶದ್ರೋಹ ಪ್ರಕರಣ ದಾಖಲಿಸಬಹುದು: ತನ್ನ ಪಕ್ಷದ ಸರಕಾರದ ವಿರುದ್ಧವೇ ಬಿಜೆಪಿ ಶಾಸಕ ಅಸಮಾಧಾನ

Update: 2021-05-17 15:13 IST

ಲಕ್ನೋ: ಉತ್ತರಪ್ರದೇಶದ ಬಿಜೆಪಿ ಸರಕಾರದ ವಿರುದ್ಧ ಸ್ವಪಕ್ಷದ ಶಾಸಕ ರಾಕೇಶ್‌ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಮಾಧ್ಯಮಗಳೊಂದಿಗೆ ಮಾತನಾಡಿದ್ದಲ್ಲಿ ನನ್ನ ವಿರುದ್ಧ ಸರಕಾರ ದೇಶದ್ರೋಹ ಪ್ರಕರಣ ದಾಖಲಿಸಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ.

"ನಾನು ಹಲವಾರು ಕಾರ್ಯಗಳನ್ನು ಕೈಗೊಂಡಿದ್ದೇನೆ. ಆದರೆ ಶಾಸಕರ ಕುರಿತು ಇಲ್ಲಿ ಯಾವ ನಿಲುವಿದೆ? ನಾನೇದಾರೂ ಹೆಚ್ಚು ಮಾತನಾಡಿದರೆ ನನ್ನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬಹುದು" ಎಂದು ಸೀತಾಫುರ ಪಟ್ಟಣದಲ್ಲಿ ಸರಕಾರಿ ಆರೋಗ್ಯ ಕೇಂದ್ರವನ್ನು ಮರು ಕಾರ್ಯಗತಗೊಳಿಸುವ ಕುರಿತು ಅವರನ್ನು ಪ್ರಶ್ನಿಸಿದಾಗ ಅವರು ಉತ್ತರ ನೀಡಿದರು. 

ನಿಮ್ಮದೆ ಸರಕಾರ ಇರುವಾಗ, ಅದೇ ಸರಕಾರವನ್ನು ನೀವು ಪ್ರತಿನಿಧಿಸಿ ನಿಮಗೆ ನಿರ್ಧಾರಗಳನ್ನು ಕೈಗೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿದಾಗ, "ಇಲ್ಲಿ ಶಾಸಕರು ತಮ್ಮ ಮನದಲ್ಲಿದುದನ್ನು ಬಹಿರಂಗವಾಗಿ ಹೇಳಬಹುದು ಎಂದು ನಿಮಗನಿಸುತ್ತಿದೆಯೇ? ನಾನು ಈ ಕುರಿತು ಈ ಹಿಂದೆಯೂ ಪ್ರಶ್ನಿಸಿದ್ದೆ ಎಂಬುವುದು ನಿಮಗೆ ತಿಳಿದಿದೆಯಲ್ಲವೇ" ಎಂದು ಅವರು ಉತ್ತರಿಸಿದ್ದಾರೆ.

ಮೊದಲ ಬಾರಿ ಶಾಸಕರಾಗಿರುವ ರಾಥೋಡ್‌ 2017ರ ಚುನಾವಣೆಗೂ ಮುಂಚೆ ಬಿಜೆಪಿ ಸೇರಿದ್ದರು. ಈ ಹಿಂದೆ ಸ್ವತಂತ್ರಾಗಿ ಅವರು ಚುನಾವಣೆಗೆ ಸ್ಫರ್ಧಿಸಿದ್ದು, ಮಾಯಾವತಿಯ ಬಹುಜನ ಸಮಾಜ ಪಕ್ಷದಲ್ಲೂ ಅವರು ನಂಟು ಹೊಂದಿದ್ದರು ಎಂದು ತಿಳಿದು ಬಂದಿದೆ. ಈ ಹಿಂದೆ ಪ್ರಧಾನಿ ಮೋದಿಯ ಕುರಿತು ಟೀಕಿಸಿದ್ದಕ್ಕೆ ಬಿಜೆಪಿ ಅವರಿಂದ ಸ್ಪಷ್ಟನೆ ಕೋರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News