×
Ad

ಕೋವಿಡ್‌ ನಿಂದ ಮೃತಪಟ್ಟವರನ್ನು ನೆನೆದು ಕಣ್ಣೀರಿಟ್ಟ ಪ್ರಧಾನಿ: ಜನರು ಪ್ರತಿಕ್ರಿಯಿಸಿದ್ದು ಹೀಗೆ

Update: 2021-05-21 14:39 IST

ಹೊಸದಿಲ್ಲಿ: ಭಾರತದಾದ್ಯಂತ ಕೋವಿಡ್‌ ಪರಿಸ್ಥಿತಿಯು ತಾರಕಕ್ಕೇರಿದೆ. ಬಿಗಡಾಯಿಸಿರುವ ಈ ಪರಿಸ್ಥಿತಿಯು ಇದುವರೆಗೂ ಶಾಂತವಾಗಲ್ಲ. ಸರಕಾರ ತನ್ನ ವೈಫಲ್ಯವನ್ನು ಮರೆಮಾಚಲು ಸತತ ಪ್ರಯತ್ನ ನಡೆಸುತ್ತಿದ್ದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಕಾರದ ವೈಫಲ್ಯವು ಚರ್ಚೆಯಾಗುತ್ತಿದೆ. ಈ ನಡುವೆ ವಾರಣಾಸಿಯ ವೈದ್ಯರೊಂದಿಗೆ ಸಂವಾದ ನಡೆಸುತ್ತಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಕಣ್ಣೀರು ಹಾಕಿದ್ದು ಸಾಮಾಜಿಕ ತಾಣದಾದ್ಯಂತ ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಗಿದೆ.

"ನನಗೆ ಶಾಲೆಯಲ್ಲಿ ಏನಾದರೂ ತೊಂದರೆಯಾದಾಗ ಅಥವಾ ನನಗೆ ಖಂಡಿತಾ ಶಿಕ್ಷಕಿಯಿಂದ ಬೆತ್ತದೇಟು ಸಿಗುತ್ತದೆಂದು ಮನವರಿಕೆಯಾದಾಗ ನಾನು ಕೂಡಾ ಇಂತಹದೇ ನಾಟಕವಾಡುತ್ತಿದ್ದೆ. ಆದರೆ ಅದು ವರ್ಕ್‌ ಆಗುತ್ತಿರಲಿಲ್ಲ. ಇಲ್ಲಿ ಒಬ್ಬರು ಅದೇ ರೀತಿ ಮಾಡುತ್ತಿದ್ದಾರೆ. ಆದರೆ ಇದು ಕೂಡಾ ವರ್ಕ್‌ ಆಗುವುದಿಲ್ಲ" ಎಂದು ವಿನಯ್‌ ಎಂಬ ಟ್ವಿಟರ್‌ ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.

"ಚುನಾವಣಾ ರ್ಯಾಲಿಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದನ್ನು ಪ್ರಶಂಸಿಸಿದ ವ್ಯಕ್ತಿ, ವ್ಯಾಕ್ಸಿನ್‌ ಅಗತ್ಯವಿಲ್ಲದೇ ಕೋವಿಡ್‌ ಅನ್ನು ಸೋಲಿಸಿದ್ದೇ ಎಂದಿದ್ದ ವ್ಯಕ್ತಿ ಈಗ ಅಳುತ್ತಿದ್ದಾರೆ", ಓವರ್‌ ಆಕ್ಟಿಂಗ್‌ ಮಾಡಿದ್ದಕ್ಕೆ 50ರೂ. ಕಟ್‌ ಮಾಡಿ ಎಂದು ಇನ್ನೋರ್ವ ಬಳಕೆದಾರರು ಟ್ವೀಟ್‌ ಮೂಲಕ ವ್ಯಂಗ್ಯವಾಡಿದ್ದಾರೆ.

"ಈ ವಿಚಾರದಲ್ಲಿ ಯಾರೂ ಅಚ್ಚರಿಗೊಳಗಾಗುವುದಿಲ್ಲ. ಏಕೆಂದರೆ ಪರಿಸ್ಥಿತಿ ಸಂಪೂರ್ಣ ವಿಕೋಪಕ್ಕೆ ತಿರುಗಿದಾಗ ಹೀಗೆಯೇ ಸಂಭವಿಸುತ್ತದೆ ಎಂದು ಎಲ್ಲರಿಗೂ ತಿಳಿದಿದೆ" ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನಿತರ ಟ್ವೀಟ್‌ ಗಳು ಈ ಕೆಳಗಿನಂತಿವೆ.

'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News