ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ಪಟ್ಟಕ್ಕೇರಿದ ಗೌತಮ್ ಅದಾನಿ, ಪ್ರಥಮ ಸ್ಥಾನದಲ್ಲಿ ಅಂಬಾನಿ

Update: 2021-05-21 10:17 GMT

ಮುಂಬೈ : ಅದಾನಿ ಗ್ರೂಪ್ ಮುಖ್ಯಸ್ಥ  ಹಾಗೂ ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ  ಇದೀಗ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಭಾರತದ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಇದ್ದಾರೆ.

ಗುರುವಾರ ಗೌತಮ್ ಅದಾನಿ  ಅವರು ಚೀನಾದ ತಂಪು ಪಾನೀಯ ಮತ್ತು ಫಾರ್ಮಾ ಉದ್ಯಮಿ ಝೊಂಗ್ ಶನ್ಶನ್ ಅವರನ್ನು ಹಿಂದಿಕ್ಕಿ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಾಗತಿಕವಾಗಿ ಅಂಬಾನಿ 13ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೆ ಅದಾನಿ 14ನೇ ಸ್ಥಾನದಲ್ಲಿದ್ದಾರೆ.

ಅದಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ ಗುರುವಾರದಂದು 66.5 ಬಿಲಿಯನ್ ಡಾಲರ್ ತಲುಪಿದ್ದು ಝೊಂಗ್ ಅವರ ಸಂಪತ್ತಿನ ಮೌಲ್ಯ 63.6 ಬಿಲಿಯನ್ ಡಾಲರ್ ಆಗಿದೆ. ಅತ್ತ ಮುಕೇಶ್ ಅಂಬಾನಿ ಅವರ ಒಟ್ಟು ಸಂಪತ್ತಿನ ಮೌಲ್ಯ 76.5 ಬಿಲಿಯನ್ ಡಾಲರ್ ಆಗಿದೆ.

ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಅದಾನಿ ಅವರ ಸಂಪತ್ತು ಈ ವರ್ಷ 32.7 ಬಿಲಿಯನ್ ಡಾಲರಿನಷ್ಟು ಏರಿಕೆ ಕಂಡಿದ್ದರೆ ಅಂಬಾನಿ ಅವರು ಈ ವರ್ಷ 175.5 ಮಿಲಿಯನ್ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News