ಶೇ.5ಕ್ಕಿಂತ ಕೆಳಗಿಳಿದ ದಿಲ್ಲಿಯ ಕೋವಿಡ್ ಪಾಸಿಟಿವಿಟಿ ರೇಟ್

Update: 2021-05-21 10:26 GMT

ಹೊಸದಿಲ್ಲಿ: ದಿಲ್ಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 3,009 ಹೊಸ ಕೋವಿಡ್-19 ಪ್ರಕರಣಗಳು ಹಾಗೂ  252 ಸಾವುಗಳು ದಾಖಲಾಗಿವೆ. ಸಕಾರಾತ್ಮಕ ಪ್ರಮಾಣವು (ಪಾಸಿಟಿವಿಟಿ ರೇಟ್) ಶೇಕಡಾ 4.76 ಕ್ಕಿಂತ ಕಡಿಮೆಯಾಗಿದೆ. ಎಪ್ರಿಲ್ 4 ರ ನಂತರ ಮೊದಲ ಬಾರಿ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣವು ಶೇಕಡಾ 5 ಕ್ಕಿಂತ ಕಡಿಮೆಯಾಗಿದೆ.

ಕೋವಿಡ್ ಪಾಸಿಟಿವಿಟಿ ದರ ಶೇಕಡಾ 5 ಕ್ಕಿಂತ ಕಡಿಮೆ ಇದ್ದರೆ ಅದು ಸುರಕ್ಷಿತ ವಲಯದಲ್ಲಿದೆ  ಎಂದು ಪರಿಗಣಿಸಬಹುದು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿದೆ. ಇದು ಈಗ ದಿಲ್ಲಿಯಲ್ಲಿರುವ ಲಾಕ್‌ಡೌನ್ ಅನ್ನು ತೆಗೆದುಹಾಕಲು ಒತ್ತಡವನ್ನು ಹೆಚ್ಚಿಸುತ್ತದೆ. ಸಾಂಕ್ರಾಮಿಕ ರೋಗದ ಎರಡನೇ ಅಲೆಯ ನಡುವೆ ದೈನಂದಿನ ಪ್ರಕರಣಗಳು ಕಡಿಮೆಯಾಗುವುದರ ಹಿಂದೆ ಲಾಕ್ ಡೌನ್  ಪ್ರಮುಖ ಅಂಶವಾಗಿದೆ ಎಂದು  ವೈದ್ಯಕೀಯ ತಜ್ಞರು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಕಳೆದ 24 ಗಂಟೆಗಳಲ್ಲಿ ದಾಖಲಾದ ದೈನಂದಿನ ಪ್ರಕರಣಗಳ ಸಂಖ್ಯೆಯೂ ಎಪ್ರಿಲ್ 1ರ ಬಳಿಕ  ಕಡಿಮೆ ಆಗಿದೆ. ಸತತ ಮೂರನೇ ದಿನ ದಿಲ್ಲಿಯ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 4,000 ಕ್ಕಿಂತ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News