×
Ad

ಆಪ್ತ ಸಮಾಲೋಚನೆಗೆ ಕೋವಿಡ್-19 ಸಹಾಯವಾಣಿ ಆರಂಭಿಸಿದ ಆಯುಷ್ ಸಚಿವಾಲಯ

Update: 2021-05-21 20:26 IST
photo: facebook

ಹೊಸದಿಲ್ಲಿ: ಕೋವಿಡ್-19 ಸಂಬಂಧಿತ ಸಮಸ್ಯೆಗಳಿಗೆ ಆಯುಷ್ ಆಧಾರಿತ ಪರಿಹಾರಗಳನ್ನು ಒದಗಿಸಲು ಆಯುಷ್ ಸಚಿವಾಲಯವು ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ- 14443 ಅನ್ನು ಕಾರ್ಯಗತಗೊಳಿಸಿದೆ.

ಸಹಾಯವಾಣಿಯು ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯರಾತ್ರಿಯವರೆಗೆ ಪ್ಯಾನ್-ಇಂಡಿಯಾ ಕಾರ್ಯಾಚರಣೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

 ಜನರ ಪ್ರಶ್ನೆಗಳನ್ನು ಪರಿಹರಿಸಲು, ಆಯುರ್ವೇದ, ಹೋಮಿಯೋಪತಿ, ಯೋಗ ಮುಂತಾದ ವಿಷಯಗಳ ವಿಶೇಷ ತಜ್ಞರು ಸಹಾಯವಾಣಿಯಲ್ಲಿ ಲಭ್ಯವಿರುತ್ತಾರೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News