×
Ad

50% ಜನತೆ ಮಾಸ್ಕ್ ಧರಿಸುವುದಿಲ್ಲ: ಸಮೀಕ್ಷೆಯ ವರದಿಯಲ್ಲಿ ಉಲ್ಲೇಖ

Update: 2021-05-21 23:11 IST

ಹೊಸದಿಲ್ಲಿ, ಮೇ 21: ದೇಶದ ಅರ್ಧಾಂಶ ಜನತೆ ಮಾಸ್ಕ್ ಧರಿಸುವುದಿಲ್ಲ ಎಂಬುದು ಇತ್ತೀಚೆಗೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ(ಐಸಿಎಂಆರ್) ಮಹಾನಿರ್ದೇಶಕ ಬಲರಾಂ ಭಾರ್ಗವ ಹೇಳಿದ್ದಾರೆ. ಮಾಸ್ಕ್ ಧರಿಸುವ 50% ಜನರಲ್ಲಿ 64% ಜನತೆ ಮೂಗನ್ನು ಬಿಟ್ಟು ಬಾಯಿಯನ್ನು ಮಾತ್ರ ಮುಚ್ಚಿಕೊಳ್ಳುತ್ತಾರೆ. 20% ಜನ ಮಾಸ್ಕನ್ನು ತಮ್ಮ ಗಲ್ಲಕ್ಕೆ , 2% ಜನ ಕುತ್ತಿಗೆಯಲ್ಲಿ ನೇತಾಡಿಸುತ್ತಾರೆ ಎಂದವರು ಹೇಳಿದ್ದಾರೆ. 

ದೇಶದಾದ್ಯಂತದ 25 ನಗರಗಳ 2,000ಕ್ಕೂ ಅಧಿಕ ಜನರನ್ನು ಸಮೀಕ್ಷೆ ನಡೆಸಲಾಗಿದೆ ಎಂದವರು ಹೇಳಿದ್ದಾರೆ. ಜೂನ್ ಅಂತ್ಯದ ವೇಳೆಗೆ ಕೊರೋನ ಸೋಂಕು ದೈನಂದಿನ ಪರೀಕ್ಷೆಯ ಪ್ರಮಾಣವನ್ನು 45 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ(ಈಗಿನ ಪ್ರಮಾಣ 16-20 ಲಕ್ಷ). ಇದರಲ್ಲಿ 18 ಲಕ್ಷ ಆರ್ಟಿ-ಪಿಸಿಆರ್ ಪರೀಕ್ಷೆ, ಉಳಿದವು ಆರ್ಎಟಿ ಪರೀಕ್ಷೆ. ಈ ಹಿನ್ನೆಲೆಯಲ್ಲಿ ಪುಣೆಯ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಸಂಸ್ಥೆ ನಿರ್ಮಿಸಿರುವ ಮನೆಯಲ್ಲೇ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್(ಆರ್ಎಟಿ) ನಡೆಸುವ ಕಿಟ್ಗಳಿಗೆ ಅನುಮೋದನೆ ನೀಡಲಾಗಿದೆ. 

ಒಂದು ವಾರದೊಳಗೆ ಇನ್ನೂ ಮೂರು ಸಂಸ್ಥೆಗಳಿಗೆ ಆರ್ಎಟಿ ಕಿಟ್ ಪೂರೈಸಲು ಅನುಮೋದನೆ ನೀಡಲಾಗುವುದು. ಈ ಕಿಟ್ಗಳು ಮಾರುಕಟ್ಟೆಯಲ್ಲಿ 4 ದಿನದೊಳಗೆ ಲಭ್ಯವಾಗಲಿದೆ. ಜೊತೆಗೆ, 105 ಆರ್ಎಟಿ ಉತ್ಪಾದಿಸುವ ಸಂಸ್ಥೆಗಳ ಅರ್ಜಿಯನ್ನು ಪರಿಶೀಲಿಸಿ 41 ಸಂಸ್ಥೆಗಳಿಗೆ ಅನುಮೋದನೆ ನೀಡಲಾಗಿದೆ.

ಎಲ್ಲಾ ರಾಜ್ಯಗಳೂ ಆರ್ಎಟಿ ಕಿಟ್ಗಳಿಗೆ ಕಾರ್ಯಾದೇಶ(ಆರ್ಡರ್) ಸಲ್ಲಿಸಿದ್ದು ಶೀಘ್ರವೇ ದೈನಂದಿನ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಲಿವೆ. ಮನೆಯಲ್ಲಿ ಪರೀಕ್ಷೆ ನಡೆಸುವವರು ಮೆಡಿಕಲ್ ಶಾಪ್ನಿಂದ ಕಿಟ್ ಖರೀದಿಸಬೇಕು. ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಂಡರೆ ಕಿಟ್ ಬಳಸುವ ಬಗ್ಗೆ ಮಾರ್ಗಸೂಚಿ ಲಭಿಸುತ್ತದೆ. ಬಳಿಕ ಪರೀಕ್ಷೆ ನಡೆಸಿ, ಮೊಬೈಲ್ನಲ್ಲಿನ ಚಿತ್ರವನ್ನು ಕ್ಲಿಕ್ ಮಾಡಿ ಅಪ್ಲೋಡ್ ಮಾಡಿದರೆ ಪರೀಕ್ಷೆಯ ವರದಿ ಬರುತ್ತದೆ. ಈ ವರದಿ ಹಾಗೂ ವಿವರ ಗೌಪ್ಯವಾಗಿರುತ್ತದೆ ಮತ್ತು ಐಸಿಎಂಆರ್ನ ದತ್ತಾಂಶ ಸಂಗ್ರಹಕೋಶದಲ್ಲಿ ದಾಖಲಾಗುತ್ತದೆ. 

ಮಹಾ ನಗರಗಳಲ್ಲಿ ಆರ್ಟಿ ಪಿಸಿಆರ್ ಪರೀಕ್ಷೆಗೆ ಆದ್ಯತೆ ನೀಡಲಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಆರ್ಎಟಿ ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿ ಶಾಲೆ, ಕಾಲೇಜು, ಸಮುದಾಯ ಕೇಂದ್ರ ಇತ್ಯಾದಿಗಳಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಎಲ್ಲಾ ಪರೀಕ್ಷೆಯ ವರದಿಗಳನ್ನು ಐಸಿಎಂಆರ್ ಪೋರ್ಟಲ್ಗೆ ಅಪ್ಲೋಡ್ ಮಾಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಆರೋಗ್ಯಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಪ್ರೋತ್ಸಾಹ ನೀಡಲಾಗುವುದು. ಪಾಸಿಟಿವ್ ವರದಿ ಬಂದವರನ್ನು ತಕ್ಷಣವೇ ಕ್ವಾರಂಟೈನ್ನಲ್ಲಿರಿಸಬೇಕು. ನೆಗೆಟಿವ್ ವರದಿ ಬಂದರೂ, ಸೋಂಕಿನ ಲಕ್ಷಣ ಇರುವವರನ್ನು ಆರ್ಟಿ-ಪಿಸಿಆರ್ ಪರೀಕ್ಷೆಗೆ ಕಳುಹಿಸಬೇಕು. ಕಳೆದ 16 ತಿಂಗಳಲ್ಲಿ ದೇಶದಲ್ಲಿ 2,553 ಸರಕಾರಿ ಮತ್ತು ಖಾಸಗಿ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ ಎಂದು ಭಾರ್ಗವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News