ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳಲ್ಲಿ ಇಸ್ಲಾಮೋಫೋಬಿಕ್ ವಿಷಯ: ತನಿಖೆ ಆರಂಭಿಸಿದ ತಮಿಳುನಾಡು ಸರಕಾರ

Update: 2021-05-21 18:13 GMT

ಚೆನ್ನೈ: ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದ (ಟಿಎನ್‌ಒಯು) ಉಪಕುಲಪತಿ ಹಾಗೂ ಕಿಡಿ ಹೊತ್ತಿಸಲು ಕಾರಣವಾಗುವ  ವಿಷಯವನ್ನು ಹೊಂದಿರುವ ಪ್ರಥಮ ವರ್ಷದ ರಾಜಕೀಯ ವಿಜ್ಞಾನ ವಿದ್ಯಾರ್ಥಿಗಳ ಪಠ್ಯಪುಸ್ತಕದ ಲೇಖಕರ ವಿರುದ್ಧ ತಮಿಳುನಾಡು ಸರಕಾರ ತನಿಖೆ ಆರಂಭಿಸಿದೆ.

ರಾಜ್ಯ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಅವರು ಪುಸ್ತಕದಲ್ಲಿರುವ ಕೆಲವು ಭಾಗಗಳನ್ನು ಓದಿದರು. ಮುಸ್ಲಿಮರನ್ನು ಮತ ಬ್ಯಾಂಕ್ ಆಗಿ ಮಾಡಲಾಗಿದೆ ಹಾಗೂ  ಇತರ ಕೋಮುವಾದಿ ಹೇಳಿಕೆಗಳು ಪಠ್ಯದಲ್ಲಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕೆ. ಪೊನ್ಮುಡಿ, ಟಿಎನ್‌ಒಯುನಲ್ಲಿ ಪ್ರಥಮ ವರ್ಷದ ರಾಜಕೀಯ ವಿಜ್ಞಾನ ವಿದ್ಯಾರ್ಥಿಗಳಿಗಿರುವ ಪಠ್ಯಪುಸ್ತಕದ ಒಂದು ಭಾಗವನ್ನು ಓದಿದರು. ಪಠ್ಯಪುಸ್ತಕದ 142 ನೇ ಪುಟದಲ್ಲಿ ಈ ವಿಷಯವನ್ನು ಕಾಣಬಹುದು ಅದರಲ್ಲಿ ಹೀಗಿತ್ತು.. “ಅನೇಕ ಭಾರತೀಯ ರಾಜಕೀಯ ಪಕ್ಷಗಳು, ವಿಶೇಷವಾಗಿ ಡಿಎಂಕೆ ಹಾಗೂ  ಕಮ್ಯುನಿಸ್ಟ್ ಪಕ್ಷಗಳಂತಹ ಧರ್ಮಕ್ಕೆ ವಿರುದ್ಧವಾಗಿದ್ದವರು ಅವರನ್ನು (ಮುಸ್ಲಿಮರನ್ನು) ಮತ ಬ್ಯಾಂಕುಗಳಾಗಿ ಪರಿವರ್ತಿಸುತ್ತಿದ್ದಾರೆ. ಅವರು (ಪಕ್ಷಗಳು) ಅವರನ್ನು (ಮುಸ್ಲಿಮರು) ರಾಷ್ಟ್ರೀಯ ಹಾದಿಯಲ್ಲಿ ಸಾಗುವುದನ್ನು ತಡೆಯುತ್ತಿದ್ದಾರೆ. ಅವರು (ಪಕ್ಷಗಳು) ಅಲ್ಪಸಂಖ್ಯಾತರನ್ನು ಕುರುಡಾಗಿ ಪ್ರೋತ್ಸಾಹಿಸುತ್ತಾರೆ. ಮುಸ್ಲಿಮರು ಗಲಭೆ ಹಾಗೂ ಹಿಂಸಾಚಾರಕ್ಕೆ ಕಾರಣವಾದಾಗ, ಈ ಪಕ್ಷಗಳು ಅದನ್ನು ಖಂಡಿಸುವುದಿಲ್ಲ.

 “ಇದು ರಾಜಕೀಯ ವಿಜ್ಞಾನ ಪಠ್ಯಪುಸ್ತಕದಲ್ಲಿ ಇರಬೇಕಾದ ವಿಷಯವೇ? ಇದು ಇತಿಹಾಸ ಪುಸ್ತಕದಲ್ಲಿ ಇರಬೇಕಾದ ವಿಷಯವೇ? ”ಎಂದು ಸಚಿವರು ಪ್ರಶ್ನಿಸಿದ್ದಾರೆ.

ವಿಶ್ವವಿದ್ಯಾನಿಲಯದ ಉಪಕುಲಪತಿ, ರಾಜಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಪಠ್ಯಪುಸ್ತಕದ ಲೇಖಕರು ವಿದ್ಯಾರ್ಥಿಗಳಿಗೆ ಇಂತಹ ವಿಷಯವನ್ನು ಏಕೆ ನೀಡಲಾಗುತ್ತಿದೆ ಎಂಬುದಕ್ಕೆ ಯಾವುದೇ ಉತ್ತರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ ಪೊನ್ಮುಡಿ, ಈ ವಿಷಯದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News