ಕೇರಳ ವಿಪಕ್ಷ ನಾಯಕನಾಗಿ ವಿ.ಡಿ.ಸತೀಶನ್ ಆಯ್ಕೆ
Update: 2021-05-22 13:14 IST
ತಿರುವನಂತಪುರಂ: ಕೇರಳದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ವಾರಗಳ ನಂತರ ಪಕ್ಷವು ವಿ.ಡಿ.ಸತೀಶನ್ ಅವರನ್ನು ವಿರೋಧ ಪಕ್ಷದ ಹೊಸ ನಾಯಕರನ್ನಾಗಿ ಆಯ್ಕೆ ಮಾಡಿದೆ. 56ರ ವಯಸ್ಸಿನ ಸತೀಶನ್ ಅವರು ರಮೇಶ್ ಚೆನ್ನಿಥಲ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದಲ್ಲಿ ಅಮೂಲಾಗ್ರ ಬದಲಾವಣೆ ಮಾಡಬೇಕೆಂಬ ಆಗ್ರಹದ ಮಧ್ಯೆ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ವಿ.ಡಿ.ಸತೀಶನ್ ಅವರ ನೇಮಕವು ರಾಜ್ಯದಲ್ಲಿ ಬದಲಾವಣೆಯ ಆರಂಭವಾಗಿ ನೋಡಲಾಗುತ್ತಿದೆ.
ಚುನಾಯಿತ ಪ್ರತಿನಿಧಿಗಳು ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕತ್ವದೊಂದಿಗೆ ಒಂದೊಂದಾಗಿ ಸಭೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.
ವಿ.ಡಿ.ಸತೀಶನ್ ಅವರು ಶಾಸಕರಾಗಿ ಸತತ ಐದು ಬಾರಿ ಗೆದ್ದಿದ್ದಾರೆ. ರಮೇಶ್ ಚೆನ್ನಿಥಲಾ ಅವರಂತೆಯೇ ಕೇರಳ ವಿದ್ಯಾರ್ಥಿ ಸಂಘದಿಂದ ಅವರು ಕಾಂಗ್ರೆಸ್ ನಲ್ಲಿ ಹಂತ ಹಂತವಾಗಿ ಏರಿದ್ದಾರೆ.