ಬಂಗಾಳ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ತಂದೆ, ಸಹೋದರನಿಗೆ ವೈ ಪ್ಲಸ್ ಭದ್ರತೆ

Update: 2021-05-22 08:09 GMT
ಸಿಸಿರ್ ಕುಮಾರ್ 

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ  ಹೊಸದಾಗಿ ಚುನಾಯಿತರಾದ ಎಲ್ಲಾ 77 ಬಿಜೆಪಿ ಶಾಸಕರಿಗೆ ಕೇಂದ್ರ ಭದ್ರತಾ ಪಡೆಯಿಂದ ರಕ್ಷಣೆ ಒದಗಿಸಿದ ಕೆಲ ದಿನಗಳ ನಂತರ ಕೇಂದ್ರ ಗೃಹ ಸಚಿವಾಲಯವು ಲೋಕಸಭಾ ಸಂಸದರಾದ ಸಿಸಿರ್ ಕುಮಾರ್ ಅಧಿಕಾರಿ ಹಾಗೂ  ದಿಬಿಯೆಂದು ಅಧಿಕಾರಿಗೆ ಭದ್ರತೆಯನ್ನು  ವಿಸ್ತರಿಸಿದೆ. ಈ ಕ್ರಮವು ರಾಜ್ಯದಲ್ಲಿ ರಾಜಕೀಯ ಸಂಘರ್ಷವನ್ನು ತೀಕ್ಷ್ಣಗೊಳಿಸುವ ಸಾಧ್ಯತೆಯಿದೆ. ಶಿಶಿರ್ ಅಧಿಕಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ವರ ಮಾಜಿ ಆಪ್ತ ಸುವೇಂದು ಅಧಿಕಾರಿಯ ತಂದೆ ಹಾಗೂ ದಿಬಿಯೇಂದು ಅವರು ಸುವೇಂದು  ಅವರ ಕಿರಿಯ ಸಹೋದರನಾಗಿದ್ದಾರೆ.

ಸುವೇಂದು ಅಧಿಕಾರಿ ನಂದಿಗ್ರಾಮ ಕ್ಷೇತ್ರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 1,200 ಮತಗಳಿಂದ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿದ್ದರು.

ಅಧಿಕಾರಿ ಕುಟುಂಬಕ್ಕೆ ಈಗ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಡಿಯಲ್ಲಿ ವೈ ಪ್ಲಸ್ ಶ್ರೇಣಿಯ  ಭದ್ರತೆ ಒದಗಿಸಲಾಗಿದೆ. ಇವರಿಗೆ ವೈಯಕ್ತಿಕ ಭದ್ರತಾ ಅಧಿಕಾರಿ ಹಾಗೂ ಕಮಾಂಡೋಗಳು ಸೇರಿದಂತೆ 11 ಸಶಸ್ತ್ರ ಪೊಲೀಸರು ರಕ್ಷಣೆ ನೀಡಲಿದ್ದಾರೆ.

ಶಿಶಿರ್ ಕುಮಾರ್ ಅಧಿಕಾರಿಯು ತೃಣಮೂಲ ಕಾಂಗ್ರೆಸ್ ನ ಸಂಸದರಾಗಿ ಉಳಿದಿದ್ದು,, 79 ವರ್ಷದ ಅವರು ಪಕ್ಷವನ್ನು ತೊರೆದು ಮಾರ್ಚ್ ನಲ್ಲಿ ಬಿಜೆಪಿಗೆ ಸೇರಿದ್ದರು. ದಿಬಿಯೇಂದು ಅಧಿಕಾರಿಯು ತಮ್ಲುಕ್ ಕ್ಷೇತ್ರದ ತೃಣಮೂಲ ಸಂಸದರಾಗಿ ಉಳಿದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News