×
Ad

ಪ್ರಧಾನಿ ಮೋದಿಯ ನಟನೆಗೆ ಆಸ್ಕರ್‌ ನೀಡಬೇಕು: ಟ್ವಿಟರ್‌ ನಲ್ಲಿ ವ್ಯಂಗ್ಯವಾಡಿದ ರಾಮ್‌ ಗೋಪಾಲ್‌ ವರ್ಮಾ

Update: 2021-05-23 22:33 IST

ಹೊಸದಿಲ್ಲಿ: ದೇಶದಾದ್ಯಂತ ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ಸಾಮಾನ್ಯ ಜನರ ಬದುಕು ಶೋಚನೀಯವಾಗಿದೆ. ಈ ನಡುವೆ ವಾರಣಾಸಿಯಲ್ಲಿನ ವೈದ್ಯರೊಂದಿಗೆ ಸಮಾಲೋಚನೆ ನಡೆಸುತ್ತಾ ಪ್ರಧಾನಿ ಮೋದಿ ಕೋವಿಡ್‌ ನಲ್ಲಿ ಮೃತಪಟ್ಟವರನ್ನು ನೆನೆದು ಭಾಷಣದ ನಡುವೆ ಕಣ್ಣೀರಾಗಿದ್ದರು. ಸಾಮಾಜಿಕ ತಾಣದಲ್ಲಿ ಅಂದು ʼಮೊಸಳೆ ಕಣ್ಣೀರುʼ ಟ್ರೆಂಡಿಂಗ್‌ ಆಗಿತ್ತು.

ಇದೀಗ ಈ ಕುರಿತಾದಂತೆ ಬಾಲಿವುಡ್‌ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ವ್ಯಂಗ್ಯವಾಡಿದ್ದು. ವೀಡಿಯೋವೊಂದನ್ನು ಶೇರ್‌ ಮಾಡಿದ್ದಾರೆ. ವೀಡಿಯೋದಲ್ಲಿ ಬೆಸ್ಟ್‌ ಆಕ್ಟಿಂಗ್‌ ವಿಭಾಗದ ಆಸ್ಕರ್‌ ಪ್ರಶಸ್ತಿಯನ್ನು ನರೇಂದ್ರ ಮೋದಿ ಸ್ವೀಕರಿಸುವಂತೆ ಎಡಿಟ್‌ ಮಾಡಲಾಗಿದ್ದು, ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ. 

ಇಂತಹಾ ವೀಡಿಯೋಗಳನ್ನು ಪೋಸ್ಟ್‌ ಮಾಡಿದ್ದಕ್ಕೆ ನಿಮ್ಮ ಮೇಲೆ ಐಟಿ. ಇಡಿ, ಸಿಬಿಐ ಎಲ್ಲಾ ದಾಳಿಗಳಾಗಬಹುದು ಎಚ್ಚರಿಕೆ ವಹಿಸಿ ಎಂದು ವ್ಯಕ್ತಿಯೋರ್ವರು ಪ್ರತಿಕ್ರಿಯಿಸಿದ್ದಾರೆ. "ಕೇವಲ ಆಸ್ಕರ್‌ ನೀಡಿದರೆ ಸಾಲದು, ಅವರ ಧ್ವನಿಯ ಏರಿಳಿತಕ್ಕೆ ಗ್ರಯಾಮಿ ಅವಾರ್ಡ್‌ ನೀಡಬೇಕು" ಎಂದು ಇನ್ನೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News