×
Ad

ಸಿರೆಂಜ್ ಗೆ ರೆಮ್ಡೆಸಿವಿರ್ ತುಂಬಿಸಿದ ಬಿಜೆಪಿ ಶಾಸಕ: ವಿವಾದ ಸ್ಫೋಟ

Update: 2021-05-23 22:38 IST
Photo: twitter/@TOISurat
 

ಗಾಂಧಿನಗರ, ಮೇ 23: ಭಾರತದಲ್ಲಿ ಕೊರೋನ ವೈರಸ್ ಸೋಂಕಿನ ಎರಡನೇ ಅಲೆ ಹಾವಳಿ ಎಬ್ಬಿಸುತ್ತಿರುವ ಈ ಸಂದರ್ಭ ಸೂರತ್ ಮುನ್ಸಿಪಲ್ ಕಾರ್ಪೋರೇಶನ್ನ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾರ್ಥನಾ ಸಮುದಾಯ ಕೋವಿಡ್ ಕೇಂದ್ರದಲ್ಲಿ ಕಾಮ್ರೇಜ್ನ ಬಿಜೆಪಿ ಶಾಸಕ ವಿ.ಡಿ. ಝಲವಾಡಿಯಾ ಅವರು ರೆಮ್ಡಿಸಿವಿರ್ ಸೀಸೆಯಿಂದ ಸಿರೆಂಜ್ ಅನ್ನು ತುಂಬಿಸುತ್ತಿರುವುದು ಕಂಡು ಬಂದಿದೆ.

ಐದನೇ ತರಗತಿ ನಪಾಸಾಗಿರುವ ಶಾಸಕ ವಿ.ಡಿ. ಝಲವಾಡಿಯಾ ಅವರು ಸೂರತ್ನ ಸೆಟಲೈಟ್ ನಗರದಲ್ಲಿರುವ ಕೋವಿಡ್ ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಭೆ ನಡೆಸಿರುವುದು ಕೂಡ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬಿಜೆಪಿ ಶಾಸಕ ವಿ.ಡಿ. ಝಲವಾಡಿ ಅವರ ಸ್ಥಾನವನ್ನು ತಿಳಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ.

‘‘ನಾನು ಕಳೆದ 40 ದಿನಗಳಿಂದ ಸಾರ್ಥನಾ ಸಮುದಾಯ ಭವನದಲ್ಲಿ ಸ್ವಯಂ ಸೇವಾ ಕಾರ್ಯ ಮಾಡುತ್ತಿದ್ದೇನೆ ಹಾಗೂ ಕೊವಿಡ್ ಸೋಂಕಿತರ ಆರೈಕೆಯೊಂದಿಗೆ ಅವರಿಗೆ ನೆರವು ನೀಡುತ್ತಿದ್ದೇನೆ. ನನಗೆ ವಿವಾದದ ಭಾಗವಾಗುವ ಯಾವುದೇ ಉದ್ದೇಶ ಇಲ್ಲ. ನಾನು ರೆಮ್ಡಿಸಿವಿರ್ ಡೋಸ್ ಅನ್ನು ಸಿರೆಂಜ್ಗೆ ತುಂಬಿಸಿದ್ದೇನೆ ಅಷ್ಟೇ. ಆದರೆ, ಯಾವೊಬ್ಬ ರೋಗಿಗೂ ನೀಡಿಲ್ಲ. ಇಲ್ಲಿ ನನ್ನೊಂದಿಗೆ ಸುಮಾರು 10ರಿಂದ 15 ಮಂದಿ ವೈದ್ಯರಿದ್ದಾರೆ. ನಾನು ಸುಮಾರು 200 ಜನರು ಕೊರೋನದಿಂದ ಗುಣಮುಖರಾಗಲು ನೆರವು ನೀಡಿದ್ದೇನೆ ಹಾಗೂ ಅವರನ್ನು ಆರೋಗ್ಯಯುತವಾಗಿ ಮನೆಗೆ ಕಳುಹಿಸಿ ಕೊಟ್ಟಿದ್ದೇನೆ’’ ಎಂದು ಝಲವಾಡಿಯಾ ಅವರು ಹೇಳಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ವಕ್ತಾರ ಜೈರಾಜ್ ಸಿಂಗ್, ವೈದ್ಯಕೀಯ ಸಿಬ್ಬಂದಿ ಶಾಸಕನಿಂದ ಕಲಿಯಬೇಕು ಎಂದು ಝಲವಾಡಿಯಾ ಅವರ ಬಗ್ಗೆ ಅಣಕವಾಡಿದ್ದಾರೆ. ಅಲ್ಲದೆ, ಆಸ್ಪತ್ರೆಯಲ್ಲಿ ಶಾಸಕರ ಪ್ರತಿಮೆ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News