ಲಾಕ್ ಡೌನ್ ಸಂದರ್ಭ ದೇವಾಲಯಕ್ಕೆ ಭೇಟಿ ನೀಡಿರುವ ಬಿಜೆಪಿ ನಾಯಕರು: ಬದ್ರಿನಾಥ್ ಅರ್ಚಕರ ಆಕ್ಷೇಪ
ಚಮೋಲಿ, (ಉತ್ತರಾಖಂಡ): ಕೋವಿಡ್ -19 ಉಸ್ತುವಾರಿ ಸಚಿವ ಧನ್ ಸಿಂಗ್ ರಾವತ್ ಹಾಗೂ ಇತರ ಬಿಜೆಪಿ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿದ್ದನ್ನು ಉತ್ತರಾಖಂಡದ ಬದ್ರಿನಾಥ್‌ನಲ್ಲಿರುವ ದೇವಾಲಯದ ಅರ್ಚಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಇದು ಲಾಕ್‌ಡೌನ್ ಮಾನದಂಡಗಳ ಉಲ್ಲಂಘನೆ ಎಂದು ಅವರು ಹೇಳಿದ್ದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ .
ಕೋವಿಡ್-19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ರಾಜ್ಯ ಸರಕಾರವು ಸಾರ್ವಜನಿಕರಿಗೆ ಚಾರ್ ಧಾಮ್ ಯಾತ್ರಾ ತೀರ್ಥಯಾತ್ರೆಯನ್ನು ತಡೆಹಿಡಿದಿರುವಾಗ ಬಿಜೆಪಿ ನಾಯಕರು ಬದ್ರಿನಾಥ್ ಧಾಮ್‌ಗೆ ಬಂದಿದ್ದು ಹೇಗೆ ಎಂದು ಪುರೋಹಿತರು ನಾಯಕರ ಭೇಟಿಯನ್ನು ಪ್ರಶ್ನಿಸಿದರು ಎಂದು ಎಎನ್‌ಐ ತಿಳಿಸಿದೆ.
ಸಾಂಕ್ರಾಮಿಕ ರೋಗದ ಮಧ್ಯೆ ಕುಂಭಮೇಳ ಹಾಗೂ ಚಾರ್ ಧಾಮ್ ಯಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವಾಗ ಕೋವಿಡ್ -19 ನಿಯಮಗಳನ್ನು ಪಾಲಿಸಲಾಗಿದೆಯೆ ಎಂದು ಉತ್ತರಾಖಂಡ ಹೈಕೋರ್ಟ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ರವಿವಾರ ಬೆಳಗ್ಗೆ ರಾವತ್ ಹಾಗೂ ಹಲವಾರು ಬಿಜೆಪಿ ನಾಯಕರು ಬದ್ರಿನಾಥ್ ಧಾಮ್ ಗೆ ಭೇಟಿ ನೀಡಿದ್ದರು.