×
Ad

ರಾಮ್ ದೇವ್ ರನ್ನು ಬೆಂಬಲಿಸಿ ವೈದ್ಯರನ್ನು ‘ರಾಕ್ಷಸರು’ ಎಂದ ಬಿಜೆಪಿ ಶಾಸಕ

Update: 2021-05-27 23:19 IST

ಲಕ್ನೋ: ಅಲೋಪತಿ ಔಷಧ ಹಾಗೂ  ವೈದ್ಯರ ವಿರುದ್ಧದ ವಿವಾದಾತ್ಮಕ ಹೇಳಿಕೆ ನೀಡಿರುವ  ಯೋಗ ಗುರು ರಾಮದೇವ್ ಅವರನ್ನು ಬೆಂಬಲಿಸಿದ ಪೂರ್ವ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಆಡಳಿತಾರೂಢ ಬಿಜೆಪಿ ಶಾಸಕರೊಬ್ಬರು, ಸತ್ತ ರೋಗಿಗಳನ್ನು ಜೀವಂತವಾಗಿ ತೋರಿಸುವುದರ ಮೂಲಕ ಹಣವನ್ನು ಸಂಪಾದಿಸುವ ಕೆಲವು ಅಲೋಪಥಿ ವೈದ್ಯರು 'ರಾಕ್ಷಸರು' ಎಂದು ಕರೆದಿದ್ದಾರೆ.

ಸುರೇಂದ್ರ ಸಿಂಗ್ ಅವರು ರಾಮದೇವ್ ಅವರ ಇತ್ತೀಚಿನ ಹೇಳಿಕೆಗಳನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಶಾಸಕನಾಗಿದ್ದಾರೆ.

“ನಾನು ರಾಮದೇವ್  ಅವರ ವಾದಗಳನ್ನು ಬೆಂಬಲಿಸುತ್ತೇನೆ. ಅವರು ತಮ್ಮ ವೈದ್ಯಕೀಯ ವ್ಯವಸ್ಥೆಯನ್ನು ಹೆಚ್ಚಿಸುತ್ತಿಲ್ಲ, ಬದಲಾಗಿ ಪ್ರಾಚೀನ ಆಯುರ್ವೇದ ವೈದ್ಯಕೀಯ ವ್ಯವಸ್ಥೆಯನ್ನು ಉತ್ತೇಜಿಸುತ್ತಾರೆ. ಆದ್ದರಿಂದ ಅವರ ವಾದಗಳನ್ನು ಬೆಂಬಲಿಸುವ ಅಗತ್ಯವಿದೆ’’ ಎಂದರು.

“ಆಯುರ್ವೇದ ವೈದ್ಯಕೀಯ ವ್ಯವಸ್ಥೆಯನ್ನು ಅವಲಂಬಿಸಿದರೆ  ಅದು ನಮ್ಮ ದೇಶವನ್ನು ಸ್ವಾಸ್ತ್ಯ ಭಾರತ್ ಸಮರ್ಥ್  ಭಾರತ್ (ಆರೋಗ್ಯಕರ ಭಾರತ-ಸಮರ್ಥ ಭಾರತ) ಆಗಿ ಪರಿವರ್ತಿಸುತ್ತದೆ. ರಾಜಕೀಯದಿಂದ ನಿವೃತ್ತಿಯಾದ ನಂತರ, ಭಾರತವನ್ನು ಆರೋಗ್ಯಕರ ಹಾಗೂ  ಸಮರ್ಥವನ್ನಾಗಿ ಮಾಡಲು ಯೋಗ ಹಾಗೂ ಆಯುರ್ವೇದವನ್ನು ಉತ್ತೇಜಿಸುವುದು ನನ್ನ ಜೀವನದ ಏಕೈಕ ಉದ್ದೇಶವಾಗಿದೆ”ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News