ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮರಿನ್ ಭಾಗವಹಿಸುವುದು ಅನುಮಾನ

Update: 2021-05-30 05:20 GMT

ಹೊಸದಿಲ್ಲಿ: ಮುಂಬರುವ ಜುಲೈ 23ರಂದು ಜಪಾನಿನ ರಾಜಧಾನಿ ಟೋಕಿಯೊದಲ್ಲಿ ಪ್ರಾರಂಭವಾಗುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಲಿಂಪಿಕ್ ಚಾಂಪಿಯನ್ ಸ್ಪೇನ್‌ನ ಕೆರೊಲಿನಾ ಮರಿನ್ ಮೊಣಕಾಲಿನ ಗಾಯದ ಕಾರಣದಿಂದಾಗಿ ಭಾಗವಹಿಸುವ ವಿಚಾರದಲ್ಲಿ ಅನುಮಾನ ವ್ಯಕ್ತವಾಗಿದೆ.

  ರಿಯೊ ಒಲಿಂಪಿಕ್ಸ್ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಚಾಂಪಿ ಯನ್ ಅಭ್ಯಾಸದ ಸಮಯದಲ್ಲಿ ಮೊಣಕಾಲಿನ ಗಾಯದ ಸಮಸ್ಯೆ ಕಂಡು ಬಂದಿದೆ ಎಂದು ಸ್ಪೇನ್‌ನ ಕ್ರೀಡಾ ಮಾಧ್ಯಮ ಮಾರ್ಕಾ ವರದಿ ಮಾಡಿದೆ.

     ವರದಿಯ ಪ್ರಕಾರ ವೈದ್ಯರು ಮರಿನ್ ಅವರನ್ನು ಹಲವು ಪರೀಕ್ಷೆಗೆ ಒಳಪಡಿಸಿದರು. ಈ ವೇಳೆ ಮರಿನ್ ಎಡ ಮೊಣಕಾಲಿನ ಮುಂಭಾಗದ ಕ್ರೂಸಿಯೇಟ್ ಅಸ್ಥಿರಜ್ಜು ಗಾಯದಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ.

 ಈ ಘಟನೆಯ ಬಳಿಕ ಮರಿನ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೀಡಿದ ಹೇಳಿಕೆಯಲ್ಲಿ ತಾನು ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿದರು. ‘‘ಇಂದು ನಾನು ತರಬೇತಿಯ ಸಮಯದಲ್ಲಿ ಸ್ವಲ್ಪ ಅಸ್ವಸ್ಥತೆಯನ್ನು ಅನುಭವಿಸಿದೆ. ಇದ ರಿಂದಾಗಿ ತರಬೇತಿಯನ್ನು ನಿಲ್ಲಿಸಬೇಕಾಯಿತು’’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

      ಈ ಹಿಂದೆ 2019ರ ಜನವರಿಯಲ್ಲಿ ಮರಿನ್ ಬಲ ಮೊಣಕಾಲಿಗೆ ಆಗಿದ್ದ ಗಾಯದಿಂದ ಬಳಲುತ್ತಿದ್ದರು. ಈ ಕಾರಣದಿಂದಾಗಿ ಸೆಪ್ಟಂಬರ್‌ವರೆಗೆ ಬ್ಯಾಡ್ಮಿಂಟನ್ ಕೋರ್ಟ್‌ನಿಂದ ಹೊರಗುಳಿದಿದ್ದರು. 2021ರಲ್ಲಿ ಮರಿನ್ ಐದು ಪಂದ್ಯಾವಳಿಗಳಲ್ಲಿ ಆಡಿದ್ದಾರೆ. ಅವುಗಳಲ್ಲಿ ಐದು ಪಂದ್ಯಗಳಲ್ಲಿ ಫೈನಲ್ ತಲುಪಿದ್ದಾರೆ ಮತ್ತು ನಾಲ್ಕರಲ್ಲಿ ಜಯ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News