×
Ad

ಲಸಿಕೆ ಪ್ಯಾಕೇಜ್ ಗೆ ಖಾಸಗಿ ಆಸ್ಪತ್ರೆಗಳು ಹೊಟೇಲ್ ಗಳೊಂದಿಗೆ ಕೈಜೋಡಿಸುವಂತಿಲ್ಲ:ರಾಜ್ಯಕ್ಕೆ ಕೇಂದ್ರ ಸೂಚನೆ

Update: 2021-05-30 11:19 IST

ಹೊಸದಿಲ್ಲಿ: ಕೆಲವು ಖಾಸಗಿ ಆಸ್ಪತ್ರೆಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಐಷಾರಾಮಿ ಹೋಟೆಲ್‌ಗಳ ಸಹಯೋಗದೊಂದಿಗೆ ಕೋವಿಡ್ ವ್ಯಾಕ್ಸಿನೇಷನ್‌ಗೆ ಪ್ಯಾಕೇಜ್ ನೀಡುತ್ತಿವೆ. ಖಾಸಗಿ ಆಸ್ಪತ್ರೆಗಳು ಹೊಟೇಲ್ ಗಳೊಂದಿಗೆ ಕೈಜೋಡಿಸಿ  ಲಸಿಕೆ ಪ್ಯಾಕೇಜ್ ನೀಡುವಂತಿಲ್ಲ. ಇದು ಸೂಚಿಸಲಾಗಿರುವ ಮಾರ್ಗಸೂಚಿಗೆ ವಿರುದ್ಧವಾಗಿದೆ. ಇಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಅಗತ್ಯವಿದೆ ಎಂದು ಶನಿವಾರ ರಾಜ್ಯ ಸರಕಾರಗಳಿಗೆ ಬರೆದ ಪತ್ರದಲ್ಲಿ  ಕೇಂದ್ರ ಸರಕಾರ ತಿಳಿಸಿದೆ.

ರಾಷ್ಟ್ರೀಯ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ನಡೆಸುವಾಗ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೇ ಎಂದು ಮೇಲ್ವಿಚಾರಣೆ ಹಾಗೂ  ಖಚಿತಪಡಿಸಿಕೊಳ್ಳಲು ರಾಜ್ಯಗಳು ಹಾಗೂ  ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಆರೋಗ್ಯ ಸಚಿವಾಲಯವು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

"ಸರಕಾರಿ ಹಾಗೂ  ಖಾಸಗಿ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳು, ಕೆಲಸದ ಸ್ಥಳಗಳು ವೃದ್ಧರು ಹಾಗೂ ವಿಕಲಚೇತನರ ಮನೆ  ಸಮೀಪ ಗ್ರೂಪ್ ಹೌಸ್ ಸೊಸೈಟಿಗಳು  ಆಯೋಜಿಸಿದ  ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರದಲ್ಲಿ, ಆರ್‌ಡಬ್ಲ್ಯೂಎ ಕಚೇರಿಗಳು, ಸಮುದಾಯ ಕೇಂದ್ರಗಳು, ಪಂಚಾಯತ್ ಭವನಗಳು, ಶಾಲೆ ಹಾಗೂ  ಕಾಲೇಜುಗಳು, ವೃದ್ಧಾಶ್ರಮಗಳು ಇತ್ಯಾದಿ ಸ್ಥಳಗಳಲ್ಲಿ ತಾತ್ಕಾಲಿಕ ಆಧಾರದ ಮೇಲೆ ವ್ಯಾಕ್ಸಿನೇಶನ್ ನೀಡಬಹುದು'' ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News