'ಅರ್ಥಹೀನ' ಮಾತಿನಿಂದ ಕೋವಿಡ್ ವಿರುದ್ಧ ಹೋರಾಡಲು ಸಾಧ್ಯವಿಲ್ಲ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಪ್ರತಿ ತಿಂಗಳ ರೇಡಿಯೋ ಕಾರ್ಯಕ್ರಮ "ಮನ್ ಕಿ ಬಾತ್" ಅನ್ನು ಟೀಕಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ತಿಂಗಳಿಗೊಮ್ಮೆ ಅರ್ಥಹೀನ ಮಾತಿನಿಂದ ದೇಶಕ್ಕೆ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"ಕೊರೋನವೈರಸ್ ವಿರುದ್ಧ ಹೋರಾಡಲು, ನಿಮಗೆ ಸರಿಯಾದ ಉದ್ದೇಶ, ನೀತಿ, ದೃಢ ನಿಶ್ಚಯ ಅಗತ್ಯವಿದೆ. ತಿಂಗಳಿಗೊಮ್ಮೆ ಅರ್ಥಹೀನ ಮಾತಿನಿಂದ ಏನೂ ಪ್ರಯೋಜನವಿಲ್ಲ" ಎಂದು ಕಾಂಗ್ರೆಸ್ ಸಂಸದ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
"ಮನ್ ಕಿ ಬಾತ್" ಪ್ರಧಾನಿ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವಾಗಿದ್ದು, ಇದು ಪ್ರತಿ ತಿಂಗಳ ಕೊನೆಯ ರವಿವಾರದಂದು ಪ್ರಸಾರವಾಗುತ್ತದೆ. ಪಿಎಂ ಮೋದಿ ಅವರು ಇಂದು ಬೆಳಿಗ್ಗೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮದ 77 ನೇ ಸಂಚಿಕೆಯನ್ನು ದ್ದೇಶಿಸಿ ಮಾತನಾಡಿದ್ದರು.
ಕೇಂದ್ರ ಸರಕಾರವು ಹೊರಡಿಸಿದ ಕೋವಿಡ್ -19 ಸಾವಿನ ಪ್ರಮಾಣವು ಸರಿಯಾಗಿಲ್ಲ ಹಾಗೂ ಕಡಿಮೆ ಸಾವಿನ ಸಂಖ್ಯೆ ವರದಿಯಾಗಿದೆ. ಕೇಂದ್ರವು ತಕ್ಷಣವೇ ಕಾರ್ಯನಿರ್ವಹಿಸದಿದ್ದರೆ, ವೈರಸ್ ರೂಪಾಂತರ ಹೊಂದಿ ಹಲವಾರು ಅಲೆಗಳು ಬರುತ್ತವೆ ಎಂದು ರಾಹುಲ್ ಎಚ್ಚರಿಸಿದರು.
कोरोना से लड़ने के लिए चाहिए-
— Rahul Gandhi (@RahulGandhi) May 30, 2021
सही नीयत, नीति, निश्चय।
महीने में एक बार निरर्थक बात नहीं!