7 ವರ್ಷ ಪೂರೈಸಿದ ಮೋದಿ ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ": ಶಿವಸೇನೆ ಹೇಳಿಕೆ

Update: 2021-05-30 10:09 GMT

ಮುಂಬೈ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವು ಏಳು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ "ಜನರಿಗೆ ಮೂಲಭೂತ ಸೌಕರ್ಯಗಳು ದೊರಕಿವೆಯೇ ಎನ್ನುವುದರ ಕುರಿತು ಮೋದಿ ಸರಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಶಿವಸೇನೆಯ ಮುಖಂಡ ಸಂಜಯ್‌ ರಾವತ್‌ ಹೇಳಿಕೆ ನೀಡಿದ್ದಾರೆ. ಜನರ ಅಭಿವೃದ್ಧಿಯ ಕುರಿತು ಸ್ವಲ್ಪವೇ ಗಮನ ನೀಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

"ಕೋವಿಡ್‌ ಸಾಂಕ್ರಾಮಿಕದ ಜೊತೆಗೆ ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ಜನರ ಕೆಲಸ ನಷ್ಟವಾಗಿದೆ. ದೇಶದಲ್ಲಿ ಹಣದುಬ್ಬರ ಸಮಸ್ಯೆ ಇದೆ. ಜನರು ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಹೆಣಗಾಡುತ್ತಿದ್ದಾರೆ" ಎಂದು ಅವರು ಹೇಳಿದರು.

"ಜನರು ಮೂಲಭೂತ ಸೌಕರ್ಯವಾಗಿರುವ ಆಹಾರ ಮತ್ತು ಉದ್ಯೋಗಕ್ಕಾಗಿ ಬೇಡಿಕೆಯಿಡುವ ಪರಿಸ್ಥಿತಿ ಎದುರಾಗಿದೆ. ಸಾಮಾನ್ಯ ಜನರಿಗೆ ತಾವು ಶ್ರೀಮಂತರಾಗಬೇಕು ಎಂಬ ಯಾವುದೇ ಆಗ್ರಹವಿಲ್ಲ. ಕನಿಷ್ಠ ಸೌಕರ್ಯಗಳನ್ನು ಒದಗಿಸಿದರೂ ಅವರು ಸಂತೃಪ್ತರಾಗುತ್ತಾರೆ. ಆದ್ದರಿಂದ ಮೋದಿ ಸರಕಾರ ಕಳೆದ ಹಲವು ವರ್ಷಗಳಲ್ಲಿ ಜನರಿಗೆ ಯಾವ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಎನ್ನುವುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಸಂಜಯ್‌ ರಾವತ್‌ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News