×
Ad

"ಈಗಲೇ ನೆರವು ನೀಡುವುದು ಬಿಟ್ಟು, ಪರಿಹಾರಕ್ಕಾಗಿ ಮಕ್ಕಳು 18 ವರ್ಷಗಳವರೆಗೆ ಕಾಯಬೇಕೆ?"

Update: 2021-05-30 17:20 IST

ಹೊಸದಿಲ್ಲಿ: ಪ್ರಧಾನಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತುಪರಿಸ್ಥಿತಿ ಪರಿಹಾರ ನಿಧಿಯಾಗಿರುವ ಪಿಎಂ ಕೇರ್ಸ್ ನ ಅಡಿಯಲ್ಲಿ ಕೋವಿಡ್‌ ನಿಂದಾಗಿ ಹೆತ್ತವರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ 23 ವರ್ಷ ತುಂಬಿದ ಬಳಿಕ 10 ಲಕ್ಷ ರೂ. ಪಡೆಯುವ ನಿಧಿಯನ್ನು ರೂಪಿಸಲಾಗುವುದು ಹಾಗೂ 18ನೇ ವಯಸ್ಸಿನಿಂದ ಮಾಸಿಕ ಸ್ಟೈಪಂಡ್ ಮತ್ತು ಉಚಿತ ಶಿಕ್ಷಣ ಯೋಜನೆಯನ್ನು ಪ್ರಕಟಿಸಲಾಗಿತ್ತು. ಈ ಕುರಿತಾದಂತೆ ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌ ಕೇಂದ್ರದ ನಡೆಯನ್ನು ಟೀಕಿಸಿದ್ದಾರೆ.

ಈ ಕುರಿತಾದಂತೆ ಟ್ವೀಟ್‌ ಮಾಡಿದ ಪ್ರಶಾಂತ್‌ ಕಿಶೋರ್‌, " ದುರಂತವನ್ನು ಸರಿಯಾಗಿ ನಿರ್ವಹಿಸಲಾಗದೇ, ಕೋವಿಡ್‌ ನಿಂದಾಗಿ ಅನಾಥರಾಗಿರುವ ಮಕ್ಕಳ ಮೇಲೆ ಕರುಣೆ ಮತ್ತು ಕಾಳಜಿ ತೋರುತ್ತಿರುವುದು ಮೋದಿ ಸರಕಾರದ ಹೊಸ ಮಾಸ್ಟರ್‌ ಸ್ಟ್ರೋಕ್‌ ಆಗಿದೆ. ತಂದೆತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಈಗಿಂದೀಗಲೇ ಪರಿಹಾರ ನೀಡುವುದರ ಬದಲು ಅವರು 18 ವಯಸ್ಸಿನವರಾದಾಗ ಸರಕಾರ ನೀಡಬೇಕಾದ ಸ್ಟೈಪಂಡ್‌ ಕುರಿತು ಸಕಾರಾತ್ಮಕವಾಗಿ ಚಿಂತಿಸುತ್ತಾ ಕಾಯಬೇಕಾಗಿದೆ" ಎಂದು ಟೀಕಿಸಿದ್ದಾರೆ.

"ಸಂವಿಧಾನದ ಈಗಾಗಲೇ ಶಿಕ್ಷಣದ ಹಕ್ಕನ್ನು ಖಾತರಿಪಡಿಸಿದೆ. ಈ ನಡುವೆ ಉಚಿತ ಶಿಕ್ಷಣದ ಭರವಸೆ ನೀಡಿದ ಪಿಎಂ ಕೇರ್ಸ್‌ ಗೆ ನಾವು ಆಭಾರಿಯಾಗಬೇಕಾಗಿದೆ ಎಂದು ವ್ಯಂಗ್ಯವಾಡಿದ ಅವರು, 50 ಕೋಟಿ ಭಾರತೀಯರ ಆರೋಗ್ಯ ಅಗತ್ಯತೆಗಳನ್ನು ಒಳಗೊಂಡ ಆಯುಷ್ಮಾನ್‌ ಭಾರತ್‌ ನಲ್ಲಿ ದಾಖಲಾತಿ ನೀಡಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ ಸಲ್ಲಿಸುತ್ತೇನೆ. ಆದರೆ ಇದು ಅಗತ್ಯವಿದ್ದಾಗ ಹಾಸಿಗೆ/ಆಮ್ಲಜನಕ ಒದಗಿಸಲು ವಿಫಲವಾಗಿದೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News