ಕೇಂದ್ರ ಸರಕಾರದ ಕೋವಿಡ್‌ ಲಸಿಕೆ ಪೂರೈಕೆ ನೀತಿಗೆ ಸುಪ್ರೀಂಕೋರ್ಟ್‌ ತರಾಟೆ

Update: 2021-05-31 07:48 GMT

ಹೊಸದಿಲ್ಲಿ: ವಿವಿಧ ವಯೋವರ್ಗಗಳಿಗೆ ಕೋವಿಡ್ ಲಸಿಕೆ ಪೂರೈಕೆಯಲ್ಲಿ  ತಾರತಮ್ಯಗಳೇಕೆ ಇದೆ ಎಂದು ಇಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಮಹತ್ವದ ಪ್ರಶ್ನೆಯನ್ನು ಕೇಳಿದೆಯಲ್ಲದೆ ಗ್ರಾಮೀಣ ಭಾಗದ ಜನತೆ ಕೋವಿನ್ ಮೂಲಕ ಲಸಿಕೆ ಪಡೆಯಲು ನೋಂದಣಿ ಮಾಡಲು ಯಾವ ಕ್ರಮ ಕೈಗೊಳ್ಳಲಾಗುವುದು ಎಂದು  ಪ್ರಶ್ನಿಸಿದೆ.

"ನಲ್ವತ್ತೈದು ವರ್ಷ ಮೇಲ್ಪಟ್ಟವರಿಗೆ ಅಗತ್ಯವಿರುವ ಶೇ100ರಷ್ಟು ಡೋಸ್‍ಗಳನ್ನು ಕೇಂದ್ರವೇ ಪೂರೈಸುತ್ತಿರುವಾಗಿ 18-44 ವಯೋವರ್ಗದವರಿಗೆ ಅಗತ್ಯವಿರುವ ಶೇ50ರಷ್ಟು ಲಸಿಕೆಗಳನ್ನು ಕೇಂದ್ರ ನಿಗದಿ ಪಡಿಸಿದ ದರಗಳಲ್ಲಿ ರಾಜ್ಯಗಳಿಗೆ ಒದಗಿಸಲಾಗುತ್ತಿದ್ದು ಉಳಿದವುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಒದಗಿಸಲಾಗುತ್ತಿದೆ. ಯಾವ ಆಧಾರದಲ್ಲಿ ಇದನ್ನು ನಡೆಸಲಾಗುತ್ತಿದೆ?" ಎಂದು ನ್ಯಾಯಾಲಯ ಪ್ರಶ್ನಿಸಿದೆ.

"ನೀವು ನೀಡುವ ಕಾರಣವೆಂದರೆ 45+ ವಯೋವರ್ಗದಲ್ಲಿ ಹೆಚ್ಚು ಕೋವಿಡ್ ಸಾವುಗಳು ಸಂಭವಿಸುತ್ತಿವೆ. ಆದರೆ ಎರಡನೇ ಅಲೆಯಲ್ಲಿ ಈ ಗುಂಪಿನ ಬದಲು ಅದು 18-44 ವಯೋವರ್ಗವಾಗಿದೆ. ಲಸಿಕೆ ಒದಗಿಸುವ ಉದ್ದೇಶವಿದ್ದರೆ ಕೇವಲ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಏಕೆ  ಕೇಂದ್ರ ಪೂರೈಸುತ್ತಿದೆ?" ಎಂದು  ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಎಲ್ ಎನ್ ರಾವ್ ಹಾಗೂ ಎಸ್ ರವೀಂದ್ರ ಭಟ್ ಅವರ ತ್ರಿಸದಸ್ಯ ಪೀಠ ಪ್ರಶ್ನಿಸಿದೆ.

"ರಾಜ್ಯಗಳೇಕೆ ಹೆಚ್ಚಿನ ಬೆಲೆ ತೆರಬೇಕು? ಇಡೀ ದೇಶಕ್ಕೆ ಒಂದೇ ದರ ನಿಗದಿಪಡಿಸುವ ಜವಾಬ್ದಾರಿಯನ್ನು ಕೇಂದ್ರ ವಹಿಸಬೇಕು," ಎಂದು ನ್ಯಾಯಾಲಯ ಒತ್ತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News