100 ಪಟ್ಟು ಹೆಚ್ಚು ವಿಕಿರಣಗಳು: 5ಜಿ ವಿರುದ್ಧ ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ ಜೂಹಿ ಚಾವ್ಲಾ

Update: 2021-05-31 10:31 GMT

ಹೊಸದಿಲ್ಲಿ: ದೇಶದಲ್ಲಿ 5ಜಿ ವೈರ್‌ ಲೆಸ್‌ ನೆಟ್‌ ವರ್ಕ್‌ ಗಳನ್ನು ಸ್ಥಾಪಿಸುವುದರ ವಿರುದ್ಧ ಬಾಲಿವುಡ್‌ ನಟಿ ಹಾಗೂ ಪರಿಸರವಾದಿ ಜೂಹಿ ಚಾವ್ಲಾ ಸೋಮವಾರ ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 5ಜಿ ವಿಕಿರಣವು ನಾಗರಿಕರು, ಪ್ರಾಣಿಗಳು, ಸಸ್ಯಗಳು ಮತ್ತು ಇತರ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. 

ಈ ಕುರಿತಾದಂತೆ ವಿಚಾರಣೆ ಕೈಗೆತ್ತಿಕೊಳ್ಳುವ ಮೊದಲು ನ್ಯಾಯಮೂರ್ತಿ ಸಿ ಹರಿಶಂಕರ್‌ ಅವರು ವಿಚಾರಣೆಯನ್ನು ಮತ್ತೊಂದು ನ್ಯಾಯಪೀಠಕ್ಕೆ ವರ್ಗಾಯಿಸಿದ್ದಾರೆ. ಜೂನ್‌ 2ರಂದು ಈ ಕುರಿತು ವಿಚಾರಣೆ ನಡೆಯಲಿದೆ. 

"5ಜಿ ವಿಕಿರಣಕ್ಕಾಗಿ ದೂರಸಂಪರ್ಕ ಕಂಪೆನಿಗಳ ಯೋಜನೆಯು ಭೂಮಿಯ ಮೇಲಿರುವ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ, ಸಸ್ಯಗಳಿಗೆ ವಿಕಿರಣಗಳಿಗೆ ಒಡ್ಡಿಕೊಳ್ಳದಂತೆ ಮಾಡಲು ಸಾಧ್ಯವಿಲ್ಲ. ದಿನದ 24ಗಂಟೆಗಳು, ವರ್ಷದ 365 ದಿನಗಳು ಈ ವಿಕಿರಣಗಳಿಗೆ ಒಡ್ಡಿಕೊಳ್ಳಬೇಕಾಗುತ್ತದೆ. ಆರ್‌ಎಎಫ್‌ ವಿಕಿರಣವು ಸದ್ಯ ಅಸ್ತಿತ್ವದಲ್ಲಿರುವ ವಿಕಿರಣಗಳಿಗಿಂತ 10ರಿಂದ 100 ಪಟ್ಟು ಜಾಸ್ತಿಯಾಗಿದೆ ಎಂದು ಜೂಹಿ ಚಾವ್ಲಾ ಹೇಳಿದ್ದಾರೆ.

ಈ 5ಜಿ ಯೋಜನೆಗಳು ಮಾನವರ ಮೇಲೆ ಗಂಭೀರ, ಬದಲಾಯಿಸಲಾಗದ ಪರಿಣಾಮಗಳನ್ನು ಉಂಟುಮಾಡಲು ಮತ್ತು ಭೂಮಿಯ ಎಲ್ಲಾ ಪರಿಸರ ವ್ಯವಸ್ಥೆಗಳಿಗೆ ಶಾಶ್ವತ ಹಾನಿಯನ್ನುಂಟುಮಾಡುವ ಅಪಾಯವನ್ನುಂಟುಮಾಡುತ್ತವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News