"ಆರ್ಥಿಕತೆಯ ಕರಾಳ ವರ್ಷ": ಜಿಡಿಪಿ ಸಂಕುಚನದ ಬಳಿಕ ಪಿ. ಚಿದಂಬರಂ ಹೇಳಿಕೆ

Update: 2021-06-01 12:52 GMT

ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಮಂಗಳವಾರ 2020-21ರ ಆರ್ಥಿಕ ವರ್ಷವು "ನಾಲ್ಕು ದಶಕಗಳಲ್ಲಿ ಆರ್ಥಿಕತೆಯ ಕರಾಳ ವರ್ಷ" ಎಂದು ಹೇಳಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆಯ ದರವು 7.3% ರಷ್ಟು ಸಂಕುಚಿತಗೊಂಡಿದೆ ಎಂದು ಸರ್ಕಾರದ ಮಾಹಿತಿ ನೀಡಿದ ಒಂದು ದಿನದ ನಂತರ ಮಾಜಿ ಹಣಕಾಸು ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ (ಜನವರಿ-ಮಾರ್ಚ್) ತ್ರೈಮಾಸಿಕದಲ್ಲಿ ಆರ್ಥಿಕತೆಯು ನಿರೀಕ್ಷೆಗಿಂತ 1.6% ರಷ್ಟು ಹೆಚ್ಚಾಗಿದ್ದರೂ, ಈ ಕುರಿತಾದಂತೆ ಅವರು ತಮ್ಮ ಮಾತುಗಳಲ್ಲಿ ಉಲ್ಲೇಖಿಸಿಲ್ಲ.

"ಹಣಕಾಸು ವರ್ಷದ ಮೂರನೇ ಮತ್ತು ನಾಲ್ಕನೇ ತ್ರೈಮಾಸಿಕಗಳಲ್ಲಿನ ಸಾಧನೆ ಚೇತರಿಕೆಗೆ ಕಾರಣವಾಗಲಿಲ್ಲ" ಎಂದು ಚಿದಂಬರಂ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. "0.5% ಮತ್ತು 1.6% ನ ಅಂದಾಜು ದರಗಳು ಹಿಂದಿನ ವರ್ಷದ ಅನುಗುಣವಾದ ತ್ರೈಮಾಸಿಕಗಳಲ್ಲಿ 3.3% ಮತ್ತು 3% ನಷ್ಟು ಕಡಿಮೆ ಆಧಾರದಿಂದಾಗಿವೆ" ಎಂದು ಅವರು ಹೇಳಿದರು.

"ಆರ್ಥಿಕತೆಯ ಸದ್ಯದ ಪರಿಸ್ಥಿತಿಗೆ ಕೊರೋನ ಸಾಂಕ್ರಾಮಿಕ ಬಹುದೊಡ್ಡ ಕಾರಣ ಎಂದು ನಿಶ್ಸಂಸಯವಾಗಿ ಹೇಳಬಹುದು. ಅದರ ಜೊತೆಗೆ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ಡಿಎ ಸರಕಾರದ ಅಮರ್ಥತೆ ಮತ್ತು ಅಸಮರ್ಥವಾದ ಆರ್ಥಿಕ ನಿರ್ವಹಣೆಯೂ ಇದಕ್ಕೆ ಸಂಯೋಜಿಸಲ್ಪಟ್ಟಿದೆ" ಎಂದು ಚಿದಂಬರಂ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News