ಸಾಮೂಹಿಕ ರಜೆಯಲ್ಲಿ ತೆರಳಿದ ನಾಗ್ಪುರ ಸರಕಾರಿ ವೈದ್ಯಕೀಯ ಕಾಲೇಜಿನ 230 ವೈದ್ಯರು

Update: 2021-06-01 15:05 GMT

ನಾಗ್ಪುರ: ಸ್ನಾತಕೋತ್ತರ ಪದವಿಯತ್ತ ಗಮನ ಹರಿಸಲುಪ್ರಕರಣಗಳ ಸಂಖ್ಯೆ ಕುಸಿಯುತ್ತಿರುವ ಸಮಯದಲ್ಲಿ ತಮ್ಮನ್ನು ಕೋವಿಡ್ -19 ಕರ್ತವ್ಯದಿಂದ ಮುಕ್ತಗೊಳಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಮಹಾರಾಷ್ಟ್ರದ ನಾಗ್ಪುರದ ಸರಕಾರಿ ವೈದ್ಯಕೀಯ ಕಾಲೇಜಿನ ಒಟ್ಟು 230 ನಿವಾಸಿ ವೈದ್ಯರು ಮಂಗಳವಾರದಿಂದ ಅನಿರ್ದಿಷ್ಟ ಸಾಮೂಹಿಕ ರಜೆ ಮೇಲೆ ತೆರಳಿದ್ದಾರೆ.

ವೈದ್ಯರ  ಈ ಪ್ರತಿಭಟನೆಯು ಇಂದಿರಾಗಾಂಧಿ ಸರಕಾರಿ ವೈದ್ಯಕೀಯ ಕಾಲೇಜು  ಹಾಗೂ  ಆಸ್ಪತ್ರೆಯಲ್ಲಿ (ಐಜಿಜಿಎಂಸಿಎಚ್) ತುರ್ತು ಹಾಗೂ  ಐಸಿಯು ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಈ ಹಿಂದೆ ಅವರು ಎತ್ತಿರುವ ಸಮಸ್ಯೆಗಳು ಬಗೆಹರಿಯದ ಕಾರಣ 230 ನಿವಾಸಿ ವೈದ್ಯರು ಅನಿರ್ದಿಷ್ಟ ಸಾಮೂಹಿಕ ರಜೆ ಪಡೆಯಲು ನಿರ್ಧರಿಸಿದ್ದಾರೆ ಎಂದು  ಮಹಾರಾಷ್ಟ್ರ ಅಸೋಸಿಯೇಶನ್ ​​ಆಫ್ ರೆಸಿಡೆಂಟ್ ಡಾಕ್ಟರ್ಸ್ (ಎಂಎಆರ್ಡಿ) ಅಧ್ಯಕ್ಷ ಡಾ.ರಜತ್ ಅಗರ್ ವಾಲ್ ಅವರು ಪಿಟಿಐಗೆ ತಿಳಿಸಿದರು,

ಇಂದಿರಾ ಗಾಂಧಿ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ  ಆಸ್ಪತ್ರೆಯ ನಿವಾಸಿ ವೈದ್ಯರು ಕಳೆದ 15 ತಿಂಗಳುಗಳಿಂದ ಕೋವಿಡ್  ಸಾಂಕ್ರಾಮಿಕ ಅಲೆಗಳ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ನಾಗ್ಪುರ ಜಿಲ್ಲೆಯಲ್ಲಿ ಸಾಂಕ್ರಾಮಿಕ ಪರಿಸ್ಥಿತಿ ಈಗ ನಿಯಂತ್ರಣದಲ್ಲಿರುವುದರಿಂದ ನಿವಾಸಿ ವೈದ್ಯರಿಗೆ ಸ್ನಾತಕೋತ್ತರ ಅಧ್ಯಯನದಲ್ಲಿ ಗಮನಹರಿಸಲು ಅವಕಾಶ ನೀಡಬೇಕು ಎಂದು ಡಾ.ಅಗರ್ ವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News