ಕೋವಿಡ್ ಸಂಕಷ್ಟ: ಚಿತ್ರರಂಗದ 3,000 ಕಾರ್ಮಿಕರಿಗೆ ನಟ ಯಶ್ ರಿಂದ ತಲಾ 5,000ರೂ. ಪರಿಹಾರ ಘೋಷಣೆ

Update: 2021-06-01 17:29 GMT
ನಟ ಯಶ್ (Twitter/@TheNameIsYash)

ಬೆಂಗಳೂರು, ಜೂ.1: ಕೊರೋನ ಲಾಕ್‍ಡೌನ್ ಜಾರಿಯಿಂದ ಸಂಕಷ್ಟದಲ್ಲಿರುವ ಸಿನಿಮಾ ಕ್ಷೇತ್ರದವರ ಸಹಾಯಕ್ಕೆ ನಟ ಯಶ್ ಮುಂದಾಗಿದ್ದು, ಕನ್ನಡ ಚಿತ್ರರಂಗದ ಸುಮಾರು 3 ಸಾವಿರ ಸಿನಿಮಾ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಖಾತೆಗಳಿಗೆ ತಲಾ 5 ಸಾವಿರ ರೂಪಾಯಿ ಜಮಾ ಮಾಡಲು ನಿರ್ಧರಿಸಿದ್ದಾರೆ.

ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚೂಕಮ್ಮಿ ಬುಡಮೇಲು ಮಾಡಿದೆ. ಅದರಲ್ಲೂ ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈಕಟ್ಟಿ ಕುಳಿತಿದೆ. ಇದು ಬರೀ ಮಾತನಾಡುವ ಸಮಯವಲ್ಲ, ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜತೆಗೆ ನಿಲ್ಲುವ ಸಮಯ ಎಂದು ಹೇಳಿರುವ ಅವರು ತಮ್ಮ ಈ ಸಹಾಯವನ್ನು ಘೋಷಿಸಿದ್ದಾರೆ.

ಅಧಿಕೃತ ಖಾತೆಗಳಿಗೆ ತಲಾ 5 ಸಾವಿರ ರೂಪಾಯಿಯನ್ನು ತನ್ನ ವೈಯಕ್ತಿಕ ಸಂಪಾದನೆಯ ಹಣದಿಂದ ನೀಡುವುದಾಗಿ ಹೇಳಿದ್ದಾರೆ. ಈ ಕುರಿತು ಸಿನಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಸಾ.ರಾ.ಗೋವಿಂದು, ಉಪಾಧ್ಯಕ್ಷ ರವೀಂದ್ರನಾಥ್ ಅವರ ಜತೆ ಚರ್ಚಿಸಿದ್ದು, ಅಧಿಕೃತ ಖಾತೆಗಳ ವಿವರ ಸಿಗುತ್ತಿದ್ದಂತೆ ಹಣವನ್ನು ರವಾನಿಸಲು ಆರಂಭಿಸಲಾಗುವುದು ಎಂದು ಯಶ್ ಭರವಸೆ ನೀಡಿದ್ದಾರೆ. ಈ ಮೂಲಕ ಯಶ್ ಸುಮಾರು 1.5 ಕೋಟಿ ರೂ. ಆರ್ಥಿಕ ಸಹಾಯಕ್ಕೆ ಮುಂದಾಗಿದ್ದು, ಅವರ ಈ ಕಾರ್ಯಕ್ಕೆ ಸಿನಿಮಾ ಕ್ಷೇತ್ರ ಸೇರಿ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News