×
Ad

ಮಹಾರಾಷ್ಟ್ರ: ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆ, ಕೆಲವರಿಗೆ ಉಸಿರಾಟದ ಸಮಸ್ಯೆ

Update: 2021-06-04 11:08 IST
Twitter/@ANI

ಮುಂಬೈ / ಹೊಸದಿಲ್ಲಿ: ಮಹಾರಾಷ್ಟ್ರದ ಬದ್ಲಾಪುರದ ರಾಸಾಯನಿಕ ಕಾರ್ಖಾನೆಯಲ್ಲಿ ಕಳೆದ ತಡರಾತ್ರಿ ಅನಿಲ ಸೋರಿಕೆ ಸಂಭವಿಸಿದ್ದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ.

ಶಿರ್ಗಾಂವ್ ಎಂಐಡಿಸಿಯ ನೊಬೆಲ್ ಇಂಟರ್ಮೀಡಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಅನಿಲ ಸೋರಿಕೆಯಾದ ನಂತರ ಮೂರು ಕಿಲೋಮೀಟರ್ ಪ್ರದೇಶದಲ್ಲಿ ಹಲವಾರು ಜನರು, ಉಸಿರಾಟ ಹಾಗೂ ಕಣ್ಣುಗಳಲ್ಲಿ ಉರಿ ಕಾಣಿಸುತ್ತಿರುವ ಬಗ್ಗೆ ದೂರಿದ್ದಾರೆ.

ಗುರುವಾರ ರಾತ್ರಿ 10: 22 ಕ್ಕೆ ಈ ಘಟನೆ ನಡೆದಿದ್ದು, ಒಂದು ಗಂಟೆಯೊಳಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಥಾಣೆ ಮಹಾನಗರ ಪಾಲಿಕೆ ತಿಳಿಸಿದೆ.

"ಮಹಾರಾಷ್ಟ್ರದ ಬದ್ಲಾಪುರದ ಕಾರ್ಖಾನೆಯಿಂದ ಗುರುವಾರ ರಾತ್ರಿ 10: 22 ರ ಸುಮಾರಿಗೆ ಅನಿಲ ಸೋರಿಕೆ ವರದಿಯಾಗಿದೆ. ಪ್ರದೇಶದ ಜನರು ಉಸಿರಾಡಲು ತೊಂದರೆ ಅನುಭವಿಸುತ್ತಿದ್ದರು. ಅಗ್ನಿಶಾಮಕ ದಳವು ರಾತ್ರಿ 11: 24 ಕ್ಕೆ ಸೋರಿಕೆಯನ್ನು ನಿಲ್ಲಿಸಿತು. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರೂ ಗಾಯಗೊಂಡಿಲ್ಲ''ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ಉಲ್ಲೇಖಿಸಿ  ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ನಾನು, ನನ್ನ ಇತರ ಸಹೋದ್ಯೋಗಿಗಳೊಂದಿಗೆ ಹತ್ತಿರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ, ನಮಗೆ ಉಸಿರಾಟದ ತೊಂದರೆಗಳು ಪ್ರಾರಂಭವಾದವು. ನಂತರ, ಆ ಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ಕಂಡುಬಂದಿದೆ ಎಂದು ನಮಗೆ ತಿಳಿದುಬಂತು "ಎಂದು ವ್ಯಕ್ತಿಯೊಬ್ಬರು ಎಎನ್ ಐಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News